ADVERTISEMENT

ಯುಪಿಐಗೆ ಕ್ರೆಡಿಟ್‌ ಕಾರ್ಡ್‌: ಆರ್‌ಬಿಐ ಒಪ್ಪಿಗೆ

ಪಿಟಿಐ
Published 8 ಜೂನ್ 2022, 16:42 IST
Last Updated 8 ಜೂನ್ 2022, 16:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಏಕೀಕೃತ ಪಾವತಿ ವ್ಯವಸ್ಥೆಯ (ಯುಪಿಐ) ಜೊತೆ ಕ್ರೆಡಿಟ್‌ ಕಾರ್ಡ್‌ ಜೋಡಿಸಲು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಒಪ್ಪಿಗೆ ನೀಡಿದೆ. ಇದರಿಂದಾಗಿ ಗ್ರಾಹಕರಿಗೆ ಯುಪಿಐ ಮೂಲಕ ಪಾವತಿಗೆ ಹೆಚ್ಚಿನ ಆಯ್ಕೆಗಳು ದೊರೆಯಲಿವೆ.

ಆರಂಭದಲ್ಲಿ, ‘ರೂಪೆ’ ಕ್ರೆಡಿಟ್‌ ಕಾರ್ಡ್‌ ಅನ್ನು ಯುಪಿಐ ಜೊತೆ ಲಿಂಕ್‌ ಮಾಡಿಕೊಂಡು ಪಾವತಿ ಮಾಡಬಹುದು ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಹೇಳಿದ್ದಾರೆ.

ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ ಬಳಿಕ ಇದು ಜಾರಿಗೆ ಬರಲಿದೆ. ಈ ಕುರಿತುಎನ್‌ಪಿಸಿಐಗೆ ಸೂಚನೆಗಳನ್ನು ನೀಡಲಾಗುವುದು ಎಂದು ದಾಸ್‌ ತಿಳಿಸಿದ್ದಾರೆ.

ADVERTISEMENT

ಸದ್ಯ, ಉಳಿತಾಯ ಮತ್ತು ಚಾಲ್ತಿ ಖಾತೆಗಳನ್ನು ಡೆಬಿಟ್‌ ಕಾರ್ಡ್‌ ಮೂಲಕ ಯುಪಿಐಗೆ ಜೋಡಿಸಿಕೊಂಡು ಪಾವತಿ ಮಾಡಬಹುದು. ಯುಪಿಐ ಮೂಲಕ ನಡೆಸುವ ಪಾವತಿಯು ಉಚಿತವಾಗಿದೆ. ಕ್ರೆಡಿಟ್‌ ಕಾರ್ಡ್‌ ಕಂಪನಿಗಳು ವರಮಾನಕ್ಕಾಗಿ ಸಾಮಾನ್ಯವಾಗಿ ಮರ್ಚೆಂಟ್‌ ಡಿಸ್ಕೌಂಟ್‌ ರೇಟ್‌ (ಎಂಡಿಆರ್‌) ಮೇಲೆ ಅವಲಂಬಿತವಾಗಿರುತ್ತವೆ. ಪ್ರತಿ ಬಾರಿ ವರ್ತಕರಿಗೆ ಪಾವತಿ ಮಾಡಿದಾಗ ಶುಲ್ಕ ಪಡೆಯಲಾಗುತ್ತಿದೆ.

‘ಯುಪಿಐ ಮೂಲಕ ಕ್ರೆಡಿಟ್‌ ಕಾರ್ಡ್‌ ಬಳಸುವುದಕ್ಕೆ ಶುಲ್ಕ ವಿಧಿಸುವ ಬಗ್ಗೆ ಬ್ಯಾಂಕ್‌ಗಳು ನಿರ್ಧಾರ ತೆಗೆದುಕೊಳ್ಳಲಿವೆ’ ಎಂದು ಆರ್‌ಬಿಐ ಡೆಪ್ಯುಟಿ ಗವರ್ನರ್‌ ಟಿ. ರವಿ ಶಂಕರ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.