ಮುಂಬೈ: ಫೆಬ್ರುವರಿ 29ರ ನಂತರ ಪೇಟಿಎಂ ಬಳಕೆದಾರರ ಪ್ರಿಪೇಯ್ಡ್ ಪೇಮೆಂಟ್, ವ್ಯಾಲೆಟ್ ಮತ್ತು ಫಾಸ್ಟ್‌ಟ್ಯಾಗ್‌ಗಳಿಗೆ ಯಾವುದೇ ಠೇವಣಿ ಅಥವಾ ಟಾಪ್-ಅಪ್‌ಗಳನ್ನು ಸ್ವೀಕರಿಸದಂತೆ ಪೇಟಿಎಂ ಪೇಮೆಂಟ್ ಬ್ಯಾಂಕ್ ಲಿಮಿಟೆಡ್‌ಗೆ (ಪಿಪಿಬಿಎಲ್) ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಬಂಧಿಸಿದೆ.
ಆದರೆ ಪೇಟಿಎಂ ಆ್ಯಪ್ ಕಾರ್ಯ ನಿರ್ವಹಿಸಲಿದೆ ಎಂದು ಒನ್97 ಕಮ್ಯುನಿಕೇಷನ್ಸ್ ಕಂಪನಿ ಸಂಸ್ಥಾಪಕ ಮತ್ತು ಸಿಇಒ ವಿಜಯ್ ಶೇಖರ್ ಶರ್ಮಾ ಸ್ಪಷ್ಟಪಡಿಸಿದ್ದಾರೆ.
'ಪೇಟಿಎಂ ಬಳಕೆದಾರರು ನೀಡಿರುವ ಬೆಂಬಲಕ್ಕೆ ನಾವು ಆಭಾರಿಯಾಗಿದ್ದೇವೆ. ನಿಮ್ಮಮೆಚ್ಚಿನ ಪೇಟಿಎಂ ಆ್ಯಪ್ ಕಾರ್ಯ ನಿರ್ವಹಣೆಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಫೆಬ್ರುವರಿ 29ರ ನಂತರವೂ ಎಂದಿನಂತೆ ಕಾರ್ಯ ನಿರ್ವಹಿಸಲಿದೆ' ಎಂದು ಅವರು ತಿಳಿಸಿದ್ದಾರೆ.
'ಪ್ರತಿ ಸವಾಲಿಗೂ ಉತ್ತರವಿದೆ. ದೇಶಕ್ಕಾಗಿ ನಮ್ಮ ಸೇವೆಯನ್ನು ಪ್ರಮಾಣಿಕವಾಗಿ ನೀಡಲು ಬದ್ಧರಾಗಿದ್ದೇವೆ. ಪೇಟಿಎಂನ ನಾವೀನ್ಯತೆಯ ಪೇಮೆಂಟ್ ಸೇವೆಗಳು ಜಗತ್ತಿನಲ್ಲೇ ಭಾರತಕ್ಕೆ ಹೆಸರು ಮಾಡಿಕೊಟ್ಟಿದೆ. ಈ ಪೈಕಿ 'ಪೇಟಿಎಂ ಕರೋ' ಚಾಂಪಿಯನ್ ಎನಿಸಿಕೊಂಡಿದೆ ಎಂದು ಅವರು ಉಲ್ಲೇಖ ಮಾಡಿದ್ದಾರೆ.
ಪಿಪಿಬಿಎಲ್ ವಿರುದ್ಧ ಆರ್‌ಬಿಐ ಸಮಗ್ರ ವ್ಯವಸ್ಥೆಯ ಲೆಕ್ಕಪರಿಶೋಧಕರ ವರದಿ ಮತ್ತು ಬಾಹ್ಯ ಲೆಕ್ಕಪರಿಶೋಧಕರ ಮೌಲ್ಯಮಾಪನಾ ವರದಿಯನ್ನು ಆಧರಿಸಿ ಈ ಕ್ರಮ ಕೈಗೊಂಡಿದೆ.
ಮತ್ತೊಂದೆಡೆ ಆರ್‌ಬಿಐ ವಿಧಿಸಿರುವ ನಿರ್ಬಂಧದಿಂದ ಪೇಟಿಎಂ ಷೇರುಗಳ ಮೌಲ್ಯ ಭಾರಿ ಕುಸಿತ ಕಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.