ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತನ್ನದೇ ಆದ ಡಿಜಿಟಲ್ ಕರೆನ್ಸಿಯನ್ನು ಸಗಟು ಮತ್ತು ಚಿಲ್ಲರೆ ವ್ಯಾಪಾರ ವಲಯಗಳಿಗೆ ಶೀಘ್ರವಾಗಿ, ಹಂತ ಹಂತವಾಗಿ ಚಲಾವಣೆ ತರಲು ಕೆಲಸ ನಡೆಸಿದೆ ಎಂದು ಆರ್‌ಬಿಐ ಡೆಪ್ಯುಟಿ ಗವರ್ನರ್‌ಟಿ. ರವಿಶಂಕರ್ ತಿಳಿಸಿದ್ದಾರೆ.
ವಿಶ್ವದ ಹಲವು ಕೇಂದ್ರೀಯ ಬ್ಯಾಂಕ್‌ಗಳು ತಮ್ಮದೇ ಆದ ಡಿಜಿಟಲ್ ಕರೆನ್ಸಿಯನ್ನು ರೂಪಿಸುತ್ತಿವೆ ಎಂದೂ ಅವರು ಹೇಳಿದ್ದಾರೆ. ಕೆಲವು ವರ್ಚುವಲ್ ಕರೆನ್ಸಿಗಳ ಮೌಲ್ಯದಲ್ಲಿ ಕಂಡುಬರುತ್ತಿರುವ ಭಾರಿ ಅಸ್ಥಿರತೆಯಿಂದ ಗ್ರಾಹಕರನ್ನು ರಕ್ಷಿಸಲು ಕೇಂದ್ರೀಯ ಬ್ಯಾಂಕ್‌ಗಳು ತಮ್ಮದೇ ಆದ ಡಿಜಿಟಲ್ ಕರೆನ್ಸಿ ಹೊಂದುವುದು ಅಗತ್ಯ ಎಂದು ರವಿಶಂಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಹಣಕಾಸು ಸಚಿವಾಲಯ ರಚಿಸಿರುವ ಅಂತರ ಸಚಿವಾಲಯದ ಸಮಿತಿಯೊಂದು, ಕೇಂದ್ರೀಯ ಬ್ಯಾಂಕ್ ವತಿಯಿಂದ ಡಿಜಿಟಲ್ ಕರೆನ್ಸಿಯನ್ನು ಚಲಾವಣೆಗೆ ತರಬೇಕು ಎಂದು ಶಿಫಾರಸು ಮಾಡಿದೆ. ‘ಈ ಬಗೆಯ ಕರೆನ್ಸಿಯನ್ನು ಚಲಾವಣೆಗೆ ಬಿಡುವುದರ ಸಾಧಕ, ಬಾಧಕವನ್ನು ಆರ್‌ಬಿಐ ಪರಿಶೀಲಿಸುತ್ತಿದೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.