ಮುಂಬೈ: ತ್ವರಿತ ಪಾವತಿ ವ್ಯವಸ್ಥೆಗೆ ಉತ್ತೇಜನ ನೀಡಲು ಯುಪಿಐ ಲೈಟ್ ವ್ಯಾಲೆಟ್ ಮಿತಿಯನ್ನು ₹5 ಸಾವಿರಕ್ಕೆ ಮತ್ತು ಪ್ರತಿ ವಹಿವಾಟಿನ ಮಿತಿಯನ್ನು ₹1 ಸಾವಿರಕ್ಕೆ ಹೆಚ್ಚಿಸಲಾಗಿದೆ.
ಈ ಮೊದಲು ಪ್ರತಿ ವಹಿವಾಟಿನ ಮಿತಿ ₹500 ಇತ್ತು. ಯುಪಿಐ ಲೈಟ್ ವ್ಯಾಲೆಟ್ ಮಿತಿಯನ್ನು ₹2 ಸಾವಿರಕ್ಕೆ ನಿಗದಿಪಡಿಸಲಾಗಿತ್ತು.
ಯುಪಿಐ123ಪೇ (ಫೀಚರ್ ಫೋನ್) ಸೇವೆಯಲ್ಲಿನ ಪ್ರತಿ ವರ್ಗಾವಣೆ ಮಿತಿಯನ್ನು ₹5 ಸಾವಿರದಿಂದ ₹10 ಸಾವಿರಕ್ಕೆ ಹೆಚ್ಚಿಸಲಾಗಿದೆ.
2022ರ ಮಾರ್ಚ್‌ನಲ್ಲಿ ಫೀಚರ್ ಫೋನ್ ಬಳಕೆದಾರರಿಗೆ ಯುಪಿಐ123ಪೇ ಬಳಸಲು ಅವಕಾಶ ಕಲ್ಪಿಸಲಾಯಿತು. ಇದು ಪ್ರಸ್ತುತ 12 ಭಾಷೆಗಳಲ್ಲಿ ಲಭ್ಯವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.