ಮುಂಬೈ (ಪಿಟಿಐ): ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ವಿವರಗಳನ್ನು ಪಾವತಿ ವಹಿವಾಟಿನ ಪಾಲುದಾರರು ‘ಟೋಕನ್’ ರೂಪದಲ್ಲಿ ಮಾತ್ರ ಸಂಗ್ರಹಿಸುವ ವ್ಯವಸ್ಥೆ ಜಾರಿಗೆ ತರಲು ನೀಡಿದ್ದ ಗಡುವನ್ನು ಆರ್‌ಬಿಐ ಸೆಪ್ಟೆಂಬರ್ 30ರವರೆಗೆ ಮುಂದೂಡಿದೆ.
ಉದ್ಯಮ ವಲಯ ಸಲ್ಲಿಸಿದ್ದ ಮನವಿಗಳನ್ನು ಆಧರಿಸಿ ಆರ್‌ಬಿಐ ಈ ತೀರ್ಮಾನ ಕೈಗೊಂಡಿದೆ. ಈ ವ್ಯವಸ್ಥೆಯ ಜಾರಿಗೆ ನೀಡಿದ್ದ ಗಡುವನ್ನು ಆರ್‌ಬಿಐ ಈ ಹಿಂದೆಯೂ ವಿಸ್ತರಿಸಿತ್ತು.
ವ್ಯವಸ್ಥೆಯ ಜಾರಿಯಲ್ಲಿ ಕೆಲವು ಸಮಸ್ಯೆಗಳು ಇವೆ ಎಂದು ಉದ್ಯಮ ವಲಯವು ಹೇಳಿತ್ತು. ‘ಕಾರ್ಡ್ ಹೊಂದಿರುವವರಿಗೆ ತೊಂದರೆ ಆಗದಿರಲಿ ಎಂದು ಇವುಗಳನ್ನು ಪರಿಶೀಲಿಸಲಾಗುತ್ತಿದೆ, ಸಂಬಂಧಪಟ್ಟವರ ಜೊತೆ ಸಮಾಲೋಚನೆ ನಡೆಸಲಾಗುತ್ತಿದೆ’ ಎಂದು ಆರ್‌ಬಿಐ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.