ADVERTISEMENT

ಎಚ್‌ಎಸ್‌ಬಿಸಿ ಬ್ಯಾಂಕ್‌ಗೆ ₹ 29.6 ಲಕ್ಷ ದಂಡ ವಿಧಿಸಿದ ಆರ್‌ಬಿಐ

ಏಜೆನ್ಸೀಸ್
Published 28 ಜೂನ್ 2024, 13:59 IST
Last Updated 28 ಜೂನ್ 2024, 13:59 IST
ಆರ್‌ಬಿಐ
ಆರ್‌ಬಿಐ   

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ನಿರ್ದೇಶನಗಳನ್ನು ಪಾಲಿಸದ ಕಾರಣ ಹಾಂಗ್‌ಕಾಂಗ್‌ ಮತ್ತು ಶಾಂಘೈ ಬ್ಯಾಂಕಿಂಗ್‌ ಕಾರ್ಪೊರೇಷನ್‌ ಲಿ.ಗೆ (ಎಚ್‌ಎಸ್‌ಬಿಸಿ) ₹ 29.6 ಲಕ್ಷ ದಂಡ ವಿಧಿಸಲಾಗಿದೆ.

ಕ್ರೆಡಿಟ್‌ ಕಾರ್ಡ್‌, ಡೆಬಿಟ್‌ ಕಾರ್ಡ್‌ ಮತ್ತು ಇತರೆ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ ಪ್ರಕಟಿಸಿದ್ದ ನಿರ್ದೇಶನಗಳನ್ನು ಪಾಲಿಸದ ಕಾರಣ ಎಚ್‌ಎಸ್‌ಬಿಸಿಗೆ ದಂಡ ವಿಧಿಸಲಾಗಿದೆ ಎಂದು ಆರ್‌ಬಿಐ ಹೇಳಿಕೆ ಬಿಡುಗಡೆ ಮಾಡಿದೆ.

ಬ್ಯಾಂಕಿನ ಆರ್ಥಿಕ ಸ್ಥಿತಿಗತಿ ಕುರಿತಂತೆ 2022ರ ಮಾರ್ಚ್‌ 31ರಂದು ಶಾಸನಬದ್ಧ ಪರಿಶೀಲನೆ ನಡೆಸಲಾಗಿತ್ತು. ನಿರ್ದೇಶನಗಳನ್ನು ಪಾಲಿಸದಿರುವುದು ಆ ವೇಳೆ ಕಂಡುಬಂದಿತ್ತು. ಅದಕ್ಕೆ ಸಂಬಂಧಿಸಿದಂತೆ ದಂಡ ವಿಧಿಸಬಾರದೇಕೆ ಎಂಬ ಕಾರಣ ಕೇಳಿ ನೋಟಿಸ್‌ ನೀಡಲಾಗಿತ್ತು. ಆದರೆ, ಸಮರ್ಥನೆ ನೀಡುವಲ್ಲಿ ಬ್ಯಾಂಕ್‌ ವಿಫಲವಾಗಿದೆ ಎಂದೂ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.