ನವದೆಹಲಿ:ಭಾರತೀಯ ರಿರ್ಸವ್ ಬ್ಯಾಂಕ್(ಆರ್‌ಬಿಐ) ಗಾಂಧಿ ಸರಣಿಯಹೊಸ ₹20 ಮುಖಬೆಲೆನೋಟುಗಳನ್ನು ಹೊರತರುವುದಾಗಿ ಹೇಳಿದೆ. ಈ ನೋಟುಗಳುಆರ್‌ಬಿಐಗವರ್ನರ್ಶಕ್ತಿಕಾಂತದಾಸ್ ಅವರ ಸಹಿಯನ್ನು ಒಳಗೊಂಡಿರಲಿದೆ.
ಹಸಿರು ಮಿಶ್ರಿತ ಹಳದಿ ಬಣ್ಣದ ₹20ಮುಖಬೆಲೆಯ ಹೊಸ ನೋಟಿನಹಿಂಬದಿಯಲ್ಲಿ ಎಲ್ಲೋರಾಗುಹೆಯ ಚಿತ್ರವಿದ್ದು,ಇದು ದೇಶದ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿದೆ ಎಂದು ಆರ್‌ಬಿಐಪ್ರಕಟಣೆಯಲ್ಲಿತಿಳಿಸಿದೆ.
ಚಾಲ್ತಿಯಲ್ಲಿರುವ ಹಿಂದಿನ ಎಲ್ಲಾ ಸರಣಿಯ₹20ನೋಟುಗಳು ಬಳಕೆಯಲ್ಲಿರಲಿವೆಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.
ಈ ಹೊಸ ನೋಟುಗಳು ಭಿನ್ನ ವಿನ್ಯಾಸ ಹಾಗೂ ಗೆರೆಗಳನ್ನು ಒಳಗೊಂಡಿದೆ.ನೋಟು63ಮಿ.ಮೀx 129ಮಿ.ಮೀ ಅಳತೆಯಲ್ಲಿರಲಿದೆಎಂದು ವಿವರಿಸಿದೆ.
ಬಲ ಭಾಗದಲ್ಲಿ ಅಶೋಕಕಂಭದ ಲಾಂಛನಬಳಸಲಾಗಿದ್ದು ₹20 ಎಂದು ಕಾಣುವಂತೆವಾಟರ್‌ಮಾರ್ಕ್ ಹೊಂದಿರಲಿದೆ.
ಮಧ್ಯಭಾಗದಲ್ಲಿ ಮಹಾತ್ಮ ಗಾಂಧಿ ಚಿತ್ರ,ಸಣ್ಣ ಅಕ್ಷರಗಳಲ್ಲಿ ಆರ್‌ಬಿಐ, ಭಾರತ್, ಇಂಡಿಯಾ, 20, ಆರ್‌ಬಿಐ ಗವರ್ನರ್ ಸಹಿ,..ಹಲವು ಗುರುತುಗಳನ್ನು ಒಳಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.