ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ), ಸತತ ಹತ್ತನೇ ಬಾರಿಯೂ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ.
ಪ್ರಸಕ್ತ ಹಣಕಾಸು ವರ್ಷದ ನಾಲ್ಕನೇ ದ್ವೈಮಾಸಿಕ ವಿತ್ತೀಯ ನೀತಿ ಪ್ರಕಟಿಸಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, ಹಣಕಾಸು ನೀತಿ ಸಮಿತಿಯು (ಎಂಪಿಸಿ) ರೆಪೊ ದರವನ್ನು ಬದಲಿಸದಿರಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
ಜಿಡಿಪಿ ಬೆಳವಣಿಗೆ ದರ ಸದೃಢವಾಗಿದ್ದರೂ, ಆಹಾರ ಹಣದುಬ್ಬರದ ಮೇಲೆ ಎಚ್ಚರ ವಹಿಸಿರುವುದಾಗಿ ದಾಸ್ ಹೇಳಿದ್ದಾರೆ.
2023ರ ಫೆಬ್ರುವರಿಯಲ್ಲಿ ರೆಪೊ ದರವನ್ನು ಶೇ 6.5ಕ್ಕೆ ಹೆಚ್ಚಿಸಿದ್ದ ಆರ್‌ಬಿಐ, ಇದುವರೆಗೆ ಪರಿಷ್ಕರಣೆ ಮಾಡಿಲ್ಲ.
ಹಣಕಾಸು ನೀತಿ ಸಮಿತಿಯನ್ನು ಕಳೆದ ತಿಂಗಳು ಪುನರ್ ರಚಿಸಲಾಗಿದೆ. ರಾಮ್ ಸಿಂಗ್, ಸೌಗತ ಭಟ್ಟಾಚಾರ್ಯ ಮತ್ತು ನಾಗೇಶ್ ಕುಮಾರ್ ಅವರು ಹೊಸದಾಗಿ ನೇಮಕಗೊಂಡಿದ್ದಾರೆ. ಅವರಿಗೆ ಇದು ಮೊದಲ ಸಭೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.