ಮುಂಬೈ: ಭಾರತ ಹಾಗೂ ಮಾಲ್ದೀವ್ಸ್, ಉಭಯ ರಾಷ್ಟ್ರಗಳ ವ್ಯಾಪಾರ ವಹಿವಾಟಿನಲ್ಲಿ ಸ್ಥಳೀಯ ಕರೆನ್ಸಿಗಳ ಬಳಕೆಗೆ ಉತ್ತೇಜನ ನೀಡಲು ಮುಂದಾಗಿವೆ.
ಈ ಕುರಿತು ಗುರುವಾರ ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್ ಶಕ್ತಿಕಾಂತ ದಾಸ್ ಹಾಗೂ ಮಾಲ್ದೀವ್ಸ್ ಹಣಕಾಸು ಪ್ರಾಧಿಕಾರದ ಗವರ್ನರ್ ಅಹಮದ್ ಮುನಾವರ್ ಒಡಂಬಡಿಕೆಗೆ ಸಹಿ ಹಾಕಿದ್ದಾರೆ.
ಚಾಲ್ತಿ ಖಾತೆ ವಹಿವಾಟು ಸೇರಿ ಇತರೆ ಹಣಕಾಸು ವಹಿವಾಟುಗಳನ್ನು ಭಾರತೀಯ ರೂಪಾಯಿ ಮತ್ತು ಮಾಲ್ದೀವ್ಸ್ ಕರೆನ್ಸಿ ಮಾಲ್ಡೀವಿಯನ್ ರುಫಿಯಾ (ಎಂವಿಆರ್) ಮೂಲಕ ನಡೆಸಲು ಈ ಒಪ್ಪಂದದಿಂದ ನೆರವಾಗಲಿದೆ ಎಂದು ಆರ್‌ಬಿಐ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.