ಮುಂಬೈ: ₹ 10 ಸಾವಿರದ ಮೊತ್ತದವರೆಗೆ ಸರಕು ಮತ್ತು ಸೇವೆಗಳನ್ನು ಖರೀದಿಸಲು ಬಳಸಬಹುದಾದ ಹೊಸ ಪ್ರಿಪೇಯ್ಡ್ ಕಾರ್ಡ್ (ಪ್ರಿಪೇಯ್ಡ್ ಪೇಮೆಂಟ್ ಇನ್ಸ್‌ಟ್ರುಮೆಂಟ್–ಪಿಪಿಐ) ಜಾರಿಗೆ ತರಲು ಆರ್‌ಬಿಐ ಉದ್ದೇಶಿಸಿದೆ.
ನಗದುರಹಿತ (ಡಿಜಿಟಲ್) ಪಾವತಿ ವ್ಯವಸ್ಥೆಯಲ್ಲಿ ‘ಪಿಪಿಐ’ಗಳು ಪ್ರಮುಖ ಪಾತ್ರ ನಿರ್ವಹಿಸುತ್ತಿವೆ. ಹೊಸ ‘ಪಿಪಿಐ’, ಡಿಜಿಟಲ್ ವಹಿವಾಟನ್ನು ಇನ್ನಷ್ಟು ಉತ್ತೇಜಿಸಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ‘ಪಿಪಿಐ’ಗಳಿಗೆ ಬ್ಯಾಂಕ್ ಖಾತೆಗಳಿಂದ ಮಾತ್ರ ಹಣ ಭರ್ತಿ ಮತ್ತು ಮರುಭರ್ತಿ ಮಾಡಲು ಅವಕಾಶ ಇರಲಿದೆ. ಬಿಲ್ ಪಾವತಿ ಮತ್ತು ವ್ಯಾಪಾರಿ ಮಳಿಗೆಗಳಲ್ಲಿನ ಸರಕುಗಳ ಖರೀದಿಗೆ ಇದನ್ನು ಬಳಸಬಹುದು. ಇದೇ 31ರಂದು ಈ ಕಾರ್ಡ್‌ಗಳ ಸಂಬಂಧ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಲಾಗುವುದು ಎಂದು ಆರ್‌ಬಿಐ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.