ADVERTISEMENT

ಆರ್‌ಬಿಐ ಎಂಪಿಸಿ ಸಭೆ ಆರಂಭ

ಪಿಟಿಐ
Published 5 ಜೂನ್ 2024, 13:50 IST
Last Updated 5 ಜೂನ್ 2024, 13:50 IST
..........
..........   

‌‌ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯು ಬುಧವಾರ ಆರಂಭವಾಗಿದೆ. 

ಗವರ್ನರ್‌ ಶಕ್ತಿಕಾಂತ ದಾಸ್‌ ಸಭೆಯ ಅಧ್ಯಕ್ಷತೆವಹಿಸಿದ್ದು, ರೆಪೊ ದರಕ್ಕೆ ಸಂಬಂಧಿಸಿದಂತೆ ಕೊನೆಯ ದಿನವಾದ ಶುಕ್ರವಾರದಂದು ನಿರ್ಣಯ ಪ್ರಕಟಿಸಲಿದ್ದಾರೆ. ಸದ್ಯ ರೆಪೊ ದರವು ಶೇ 6.5ರಷ್ಟಿದೆ. 

‘ಆರ್‌ಬಿಐ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ಸಾಧ್ಯತೆಯಿದೆ’ ಎಂದು ಎಸ್‌ಬಿಐ ಸಂಶೋಧನಾ ವರದಿ ಹೇಳಿದೆ.

ADVERTISEMENT

‘ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಚಿಲ್ಲರೆ ಹಣದುಬ್ಬರವು ಮೇ ತಿಂಗಳಲ್ಲಿ ಶೇ 5ರಷ್ಟು ದಾಖಲಾಗುವ ನಿರೀಕ್ಷೆಯಿದೆ. ಜುಲೈನಲ್ಲಿ ಶೇ 3ಕ್ಕೆ ಇಳಿಕೆಯಾಗಬಹುದು. ಪ್ರಸಕ್ತ ಹಣಕಾಸು ವರ್ಷದ ಅಕ್ಟೋಬರ್‌ವರೆಗೆ ಶೇ 5ರ ಮಿತಿಯೊಳಗೆ ದಾಖಲಾಗುವ ಸಾಧ್ಯತೆಯಿದೆ’ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.