ADVERTISEMENT

₹ 2,000 ಮುಖಬೆಲೆಯ ಶೇ 76ರಷ್ಟು ನೋಟುಗಳು ಬ್ಯಾಂಕ್‌ಗಳಿಗೆ ವಾಪಸ್: ಆರ್‌ಬಿಐ

ಪಿಟಿಐ
Published 3 ಜುಲೈ 2023, 12:26 IST
Last Updated 3 ಜುಲೈ 2023, 12:26 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಚಲಾವಣೆಯಲ್ಲಿ ಇದ್ದ ₹2,000 ಮುಖಬೆಲೆಯ ನೋಟುಗಳ ಪೈಕಿ ಶೇಕಡ 76ರಷ್ಟು ನೋಟುಗಳು ಬ್ಯಾಂಕ್‌ಗಳಿಗೆ ಮರಳಿವೆ ಎಂದು ಆರ್‌ಬಿಐ ಸೋಮವಾರ ತಿಳಿಸಿದೆ. ಈ ನೋಟುಗಳನ್ನು ಜಮಾ ಮಾಡಲು ಅಥವಾ ವಿನಿಮಯ ಮಾಡಿಕೊಳ್ಳಲು ಸೆಪ್ಟೆಂಬರ್ 30ರವರೆಗೆ ಸಮಯ ಇದೆ.

ಈ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯುವುದಾಗಿ ಆರ್‌ಬಿಐ ಮೇ 19ರಂದು ಹೇಳಿತು. ಅಂದು ಚಲಾವಣೆಯಲ್ಲಿದ್ದ ಈ ನೋಟುಗಳ ಮೌಲ್ಯವು ₹3.56 ಲಕ್ಷ ಕೋಟಿ. ಜೂನ್ 30ರಂದು ಚಲಾವಣೆಯಲ್ಲಿದ್ದ ಈ ಮುಖಬೆಲೆಯ ನೋಟುಗಳ ಮೌಲ್ಯವು ₹84 ಸಾವಿರ ಕೋಟಿ ಎಂದು ಆರ್‌ಬಿಐ ತಿಳಿಸಿದೆ.

ಬ್ಯಾಂಕ್‌ಗಳಿಗೆ ಮರಳಿರುವ ಈ ನೋಟುಗಳ ಪೈಕಿ ಶೇ 87ರಷ್ಟನ್ನು ಜಮಾ ಮಾಡಲಾಗಿದೆ. ಇನ್ನುಳಿದ ಪ್ರಮಾಣದ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ.

ADVERTISEMENT

ಸೆಪ್ಟೆಂಬರ್‌ 30ಕ್ಕೆ ಮೊದಲು ವಿನಿಮಯ ಮಾಡಿಕೊಳ್ಳದೆ ಇದ್ದರೆ ಅಥವಾ ಜಮಾ ಮಾಡದೆ ಇದ್ದರೆ ₹2,000 ಮುಖಬೆಲೆಯ ನೋಟುಗಳಿಗೆ ಕಾನೂನು ಮಾನ್ಯತೆ ಇಲ್ಲವಾಗುತ್ತದೆಯೇ ಎಂಬುದನ್ನು ಆರ್‌ಬಿಐ ಸ್ಪಷ್ಟಪಡಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.