ಮುಂಬೈ: ಈಚೆಗೆ ನಡೆದಿರುವ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ವಿಲೀನವು ಗ್ರಾಹಕರಿಗೆ ಎಷ್ಟರ ಮಟ್ಟಿಗೆ ತೃಪ್ತಿ ನೀಡಿದೆ ಎನ್ನುವ ಕುರಿತು ಸಮೀಕ್ಷೆ ನಡೆಸಲು ಆರ್‌ಬಿಐ ನಿರ್ಧರಿಸಿದೆ.
ಈ ಸಮೀಕ್ಷೆಯ ಅಡಿಯಲ್ಲಿ, ಗ್ರಾಹಕ ಸೇವೆಯ ದೃಷ್ಟಿಯಿಂದ ವಿಲೀನವು ಸಕಾರಾತ್ಮಕ ಆಗಿದೆಯೇ ಎಂಬ ಬಗ್ಗೆ ಪ್ರತಿಕ್ರಿಯೆ ಕೇಳಲಾಗುವುದು.
ಪ್ರಸ್ತಾಪಿತ ಸಮೀಕ್ಷೆಯು ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ, ಪಶ್ಚಮ ಬಂಗಾಳ, ತಮಿಳುನಾಡು, ಬಿಹಾರ, ಮಧ್ಯಪ್ರದೇಶ ಮತ್ತು ಗುಜರಾತ್ ಸೇರಿದಂತೆ ಒಟ್ಟಾರೆ 21 ರಾಜ್ಯಗಳ 20 ಸಾವಿರ ಗ್ರಾಹಕರಿಂದ ಅಭಿಪ್ರಾಯ ಸಂಗ್ರಹಿಸಲಿದೆ.
2019ರಿಂದ 2020ರವರೆಗಿನ ಅವಧಿಯಲ್ಲಿ ಆಗಿರುವ ವಿಲೀನದ ಬಳಿಕ ಗ್ರಾಹಕ ಸೇವೆ ಮತ್ತು ಗ್ರಾಹಕರ ಸಮಸ್ಯೆಗಳನ್ನು ಇತ್ಯರ್ಥಪಡಿಸುವಲ್ಲಿ ಬ್ಯಾಂಕ್ ಎಷ್ಟರಮಟ್ಟಿಗೆ ಯಶಸ್ಸು ಕಂಡಿದೆ ಎಂಬ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಏಜೆನ್ಸಿಗಳು ಈ ಸಮೀಕ್ಷೆ ನಡೆಸಲಿದ್ದು, ಜೂನ್ 22ರ ಒಳಗಾಗಿ ಆರ್‌ಬಿಐಗೆ ವರದಿ ಸಲ್ಲಿಸಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.