ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಎರಡು ಕಂತುಗಳಲ್ಲಿ ಚಿನ್ನದ ಬಾಂಡ್ ಯೋಜನೆ ಜಾರಿಗೊಳಿಸಲಿದ್ದು, ಡಿಸೆಂಬರ್ ಮತ್ತು ಮಾರ್ಚ್ ತಿಂಗಳಿನಲ್ಲಿ ಸಾರ್ವಜನಿಕರು ಬಾಂಡ್ ಖರೀದಿಸಬಹುದಾಗಿದೆ.
2022–23ರಲ್ಲಿಚಿನ್ನದ ಬ್ಯಾಂಡ್ ಯೋಜನೆಯ ಮೂರನೇ ಕಂತು ಸೋಮವಾರದಿಂದ ಆರಂಭ ಆಗಲಿದ್ದು, ಶುಕ್ರವಾರ ಮುಕ್ತಾಯ ಆಗಲಿದೆ. ನಾಲ್ಕನೇ ಕಂತು ಮಾರ್ಚ್ 6 ರಿಂದ 10ರವರೆಗೆ ಇರಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.
ಬ್ಯಾಂಕುಗಳು (ಕಿರು ಹಣಕಾಸು ಬ್ಯಾಂಕ್ ಮತ್ತು ಪೇಮೆಂಟ್ ಬ್ಯಾಕ್ಸ್ ಹೊರತುಪಡಿಸಿ), ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ, ಅಂಚೆ ಕಚೇರಿ, ಬಿಎಸ್‌ಇ ಮತ್ತು ಎನ್‌ಎಸ್ಇ ಮೂಲಕ ಚಿನ್ನದ ಬಾಂಡ್ ಮಾರಾಟ ನಡೆಯಲಿದೆ. ಕೇಂದ್ರ ಸರ್ಕಾರದ ಸಮ್ಮುಖದಲ್ಲಿ ಆರ್‌ಬಿಐ ಈ ಬಾಂಡ್‌ಗಳನ್ನು ವಿತರಣೆ ಮಾಡುತ್ತದೆ.
ಬಾಂಡ್ ಅವಧಿಯು 8 ವರ್ಷ ಇದ್ದು, ಅವಧಿ ಮುಗಿಯುವುದಕ್ಕೂ ಮುನ್ನ 5 ವರ್ಷಗಳ ಬಳಿಕ ನಗದೀಕರಿಸಬಹುದು. ವೈಯಕ್ತಿಕ ಖರೀದಿದಾರರಿಗೆ ಮತ್ತು ಹಿಂದೂ ಅವಿಭಕ್ತ ಕುಟುಂಬಕ್ಕೆ 4 ಕೆ.ಜಿ ಹಾಗೂ ಟ್ರಸ್ಟ್‌ಗಳಿಗೆ 20 ಕೆ.ಜಿಯ ಗರಿಷ್ಠ ಮಿತಿ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.