ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) 90 ವರ್ಷಗಳ ಸುದೀರ್ಘ ಪಯಣದ ಕುರಿತು ವೆಬ್ ಸರಣಿಯನ್ನು ಮಾಡುವ ಬಿಡ್ ಅನ್ನು ಸ್ಟಾರ್ ಇಂಡಿಯಾ ತನ್ನದಾಗಿಸಿಕೊಂಡಿದೆ.
ದೇಶದ ಆರ್ಥಿಕ ಬೆಳವಣಿಗೆಯಲ್ಲಿ ರಿಸರ್ವ್ ಬ್ಯಾಂಕ್‌ನ ಮಹತ್ವದ ಪಾತ್ರವನ್ನು ಜನರಿಗೆ ತಿಳಿಸಲು ಈ ವೆಬ್ ಸರಣಿ ಸಹಾಯಕವಾಗಲಿದೆ. ಆರ್‌ಬಿಐ 1935ರಲ್ಲಿ ಸ್ಥಾಪನೆಯಾಗಿದ್ದು, ಈ ವರ್ಷದ ಏಪ್ರಿಲ್‌ನಲ್ಲಿ 90 ವರ್ಷ ಪೂರೈಸಿತ್ತು.
ಆರ್‌ಬಿಐ, ಪ್ರೊಡಕ್ಷನ್ ಹೌಸ್‌ಗಳು, ಟಿವಿ ಚಾನೆಲ್‌ಗಳು ಮತ್ತು ಒಟಿಟಿ ವೇದಿಕೆಗಳಿಂದ ಪ್ರಸ್ತಾವಗಳನ್ನು ಆಹ್ವಾನಿಸಿತ್ತು. ಸ್ಟಾರ್ ಇಂಡಿಯಾ ಪ್ರೈವೆಟ್ ಲಿಮಿಟೆಡ್, ವಯಾಕಾಮ್ 18, ಜೀ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ ಲಿಮಿಟೆಡ್ ಮತ್ತು ಡಿಸ್ಕವರಿ ಕಮ್ಯುನಿಕೇಷನ್ಸ್ ಇಂಡಿಯಾ ಬಿಡ್ ಸಲ್ಲಿಸಿದ್ದವು. ಕೊನೆಗೆ ಸ್ಟಾರ್ ಇಂಡಿಯಾ ಇದನ್ನು ಪಡೆದುಕೊಂಡಿದೆ. ಆರ್‌ಬಿಐ ಪ್ರಕಾರ, ವೆಬ್ ಸರಣಿ ಮಾಡಲು ಸ್ಟಾರ್ ಇಂಡಿಯಾಗೆ ₹6.5 ಕೋಟಿಗೆ ಟೆಂಡರ್ ನೀಡಲಾಗಿದೆ.
ದೇಶದ ಟಿವಿ ಚಾನೆಲ್‌ಗಳು ಮತ್ತು ಒಟಿಟಿ ವೇದಿಕೆಗಳಲ್ಲಿ ವೆಬ್ ಸರಣಿ ಪ್ರಸಾರವಾಗಲಿದೆ. ಒಟ್ಟು ಐದು ಸಂಚಿಕೆಗಳನ್ನು (ಎಪಿಸೋಡ್) ಒಳಗೊಂಡಿದ್ದು, ಪ್ರತಿ ಸಂಚಿಕೆಯ ಅವಧಿ 25–30 ನಿಮಿಷ ಇರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.