ADVERTISEMENT

ಸೌರ, ಪವನ ವಲಯದ ಯೋಜನೆ | ₹4 ಲಕ್ಷ ಕೋಟಿ ಹೂಡಿಕೆ: ಅದಾನಿ ಸಮೂಹ

ಪಿಟಿಐ
Published 16 ಸೆಪ್ಟೆಂಬರ್ 2024, 16:07 IST
Last Updated 16 ಸೆಪ್ಟೆಂಬರ್ 2024, 16:07 IST
Adani
Adani   

ಗಾಂಧಿನಗರ: ಸೌರ, ಪವನ ಮತ್ತು ಹಸಿರು ಇಂಧನ ವಲಯದ ಯೋಜನೆಗಳಲ್ಲಿ ₹4 ಲಕ್ಷ ಕೋಟಿ ಹೂಡಿಕೆ ಮಾಡುವುದಾಗಿ ಅದಾನಿ ಸಮೂಹವು ರೀ-ಇನ್ವೆಸ್ಟ್ 2024 ಕಾರ್ಯಕ್ರಮದಲ್ಲಿ ಘೋಷಿಸಿದೆ.

ದೇಶದ ಅತಿದೊಡ್ಡ ನವೀಕರಿಸಬಹುದಾದ ಇಂಧನ ಕಂಪನಿಯಾದ ಅದಾನಿ ಗ್ರೀನ್‌ ಎನರ್ಜಿ, ಪ್ರಸ್ತುತ 11.2 ಗಿಗಾವಾಟ್‌ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಹೊಂದಿದ್ದು, 2030ರ ವೇಳೆಗೆ 50 ಗಿಗಾವಾಟ್‌ಗೆ ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಈ ಹೂಡಿಕೆಯಿಂದ 70 ಸಾವಿರಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದು ಕಂಪನಿ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.