ADVERTISEMENT

ರಿಯಲ್‌ ಎಸ್ಟೇಟ್‌: 3 ತಿಂಗಳ ಹೆಚ್ಚುವರಿ ಕಾಲಾವಕಾಶ

ಮಹೇಶ ಕುಲಕರ್ಣಿ
Published 31 ಡಿಸೆಂಬರ್ 2020, 20:38 IST
Last Updated 31 ಡಿಸೆಂಬರ್ 2020, 20:38 IST
ರಿಯಲ್ ಎಸ್ಟೇಟ್
ರಿಯಲ್ ಎಸ್ಟೇಟ್    

ಬೆಂಗಳೂರು: ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರವು (ಕೆ–ರೇರಾ) ರಿಯಲ್ ಎಸ್ಟೇಟ್ ಕಂಪನಿಗಳಿಗೆ ತಮ್ಮ ಯೋಜನೆಗಳನ್ನು ಪೂರ್ಣಗೊಳಿಸಲು ಇನ್ನೂ ಮೂರು ತಿಂಗಳ ಅವಕಾಶ ನೀಡಿದೆ.

ರೇರಾದಲ್ಲಿ ನೋಂದಣಿ ಆಗಿರುವ, ಮಾರ್ಚ್‌ 15 ಅಥವಾ ಅದರ ನಂತರ ಪೂರ್ಣಗೊಳ್ಳಬೇಕಿದ್ದ ಎಲ್ಲ ಯೋಜನೆಗಳಿಗೂ ಈ ವಿಸ್ತರಣೆಯ ಪ್ರಯೋಜನ ಸಿಗಲಿದೆ. ಕಟ್ಟಡ ನಿರ್ಮಾಣ ವಲಯದಲ್ಲಿ ಕಾರ್ಮಿ ಕರ ಕೊರತೆ ಇದ್ದ ಕಾರಣ ಕೇಂದ್ರ ಸರ್ಕಾರ ಮೇ ತಿಂಗಳಲ್ಲಿ, ಯೋಜನೆ ಪೂರ್ಣಗೊಳಿಸಲು ಆರು ತಿಂಗಳ ಕಾಲಾವಕಾಶ ಕಲ್ಪಿಸಿತ್ತು.

‘ನಾವು ಒಟ್ಟು ಒಂಬತ್ತು ತಿಂಗಳ ಕಾಲಾವಕಾಶವನ್ನು ನೀಡಿದಂತೆ ಆಗಿದೆ. ರಾಜ್ಯ ಸರ್ಕಾರದ ಸಲಹೆ ಆಧರಿಸಿ ಹೀಗೆ ಮಾಡಿದ್ದೇವೆ’ ಎಂದು ಕೆ–ರೇರಾ ಅಧ್ಯಕ್ಷ ಎಂ.ಆರ್. ಕಾಂಬ್ಳೆ ತಿಳಿಸಿದರು.

ADVERTISEMENT

ರಿಯಲ್ ಎಸ್ಟೇಟ್ ವಲಯಕ್ಕೆ ಯೋಜನೆ ಪೂರ್ಣಗೊಳಿಸಲು ಹೆಚ್ಚಿನ ಅವಧಿ ಲಭ್ಯವಾಗಿದೆಯಾದರೂ, ಮನೆ ಖರೀದಿಗೆ ಸಾಲ ಮಾಡಿ ಹಣ ಪಾವತಿಸಿ, ಸಾಲದ ಮಾಸಿಕ ಕಂತುಗಳನ್ನೂ, ಮನೆ ಬಾಡಿಗೆಯನ್ನೂ ಪಾವತಿಸುತ್ತಿರುವವರಿಗೆ ಯಾವ ವಿನಾಯಿತಿಯೂ ಇಲ್ಲ.

‘ಇದರಿಂದಾಗಿ ಮನೆ ಬಾಡಿಗೆ ಹಾಗೂ ಇಎಂಐ ಹೊರೆ ಹೆಚ್ಚಾಗುತ್ತದೆ. ಹಣ ಪಾವತಿಸಿದ್ದರೂ ಮನೆ ವಾಸಕ್ಕೆ ಸಿಗುವುದು ತಡವಾಗುತ್ತದೆ. ಬಿಲ್ಡರ್‌ಗಳು ಯಾವುದೇ ಹೊಣೆಗಾರಿಕೆಗೆ ಸಿಲುಕಿಕೊಳ್ಳದೆಯೇ ತಮ್ಮ ಯೋಜನೆ ಪೂರ್ಣಗೊಳಿಸಲು ಹೆಚ್ಚುವರಿ ಅವಧಿ ಪಡೆದುಕೊಂಡಿದ್ದಾರೆ’ ಎಂದು ‘ಫೋರಂ ಫಾರ್ ಪೀಪಲ್ಸ್‌ ಕಲೆಕ್ಟಿವ್‌ ಎಫರ್ಟ್ಸ್‌’ನ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಶಂಕರ್ ಹೇಳಿದರು. ‘ನಾವು ಈಗಲೂ ಕಾರ್ಮಿಕರ ಕೊರತೆ ಎದುರಿಸುತ್ತಿದ್ದೇವೆ. ಸರಿಸು ಮಾರು ಶೇಕಡ 80ರಷ್ಟು ಕಾರ್ಮಿಕರು ಕೆಲಸಕ್ಕೆ ಮರಳಿದ್ದಾರೆ. ಈ ಮೊದಲು ನಿಗದಿ ಮಾಡಿದ್ದ ದಿನಾಂಕದೊಳಗೆ ಯೋಜನೆಗಳು ಪೂರ್ಣಗೊಳ್ಳದಿರಬಹುದು ಎಂಬು ದನ್ನು ನಾವು ನಮ್ಮ ಗ್ರಾಹಕರಿಗೆ ತಿಳಿಸಿ ದ್ದೇವೆ’ ಎಂದು ಬ್ರಿಗೇಡ್‌ ಎಂಟರ್‌ಪ್ರೈಸಸ್‌ನ ಸಿಇಒ (ವಸತಿ ವಿಭಾಗ) ರಾಜೇಂದ್ರ ಜೋಷಿ ಪ್ರತಿಕ್ರಿಯೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.