ADVERTISEMENT

ಜಿಯೊದಿಂದ ‘ತುರ್ತು ಡೇಟಾ ಸಾಲ’ ಯೋಜನೆ: ₹11ರ ಮೌಲ್ಯಕ್ಕೆ 1ಜಿಬಿ ಡೇಟಾ

ಪಿಟಿಐ
Published 3 ಜುಲೈ 2021, 10:20 IST
Last Updated 3 ಜುಲೈ 2021, 10:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ರಿಲಯನ್ಸ್‌ ಜಿಯೊ ಕಂಪನಿಯು ತನ್ನಪ್ರಿಪೇಯ್ಡ್‌ ಗ್ರಾಹಕರಿಗೆ ಈಗ ರೀಚಾರ್ಜ್‌ ಮಾಡಿ ನಂತರ ಪಾವತಿಸುವ ‘ತುರ್ತು ಡೇಟಾ ಸಾಲ’ ಯೋಜನೆಯನ್ನು ಬಿಡುಗಡೆ ಮಾಡಿದೆ.

ಮೈ ಜಿಯೊ ಆ್ಯಪ್‌ ಮೂಲಕ ತುರ್ತು ಡೇಟಾ ಸಾಲ ಪಡೆಯಬಹುದಾಗಿದೆ. ₹ 11ರ ಮೌಲ್ಯಕ್ಕೆ 1ಜಿಬಿ ಡೇಟಾ ಸಿಗಲಿದೆ. ಈ ರೀತಿ ಒಟ್ಟಾರೆ ಐದು ಬಾರಿ ತುರ್ತು ಡೇಟಾ ಸಾಲ ಪಡೆಯಬಹುದು ಎಂದು ಮೂಲಗಳು ಹೇಳಿವೆ.

ಹಲವು ಕಾರಣಗಳಿಂದಾಗಿ ಪ್ರತಿಯೊಬ್ಬ ಗ್ರಾಹಕರೂ ತಕ್ಷಣವೇ ಡೇಟಾ ಟಾಪ್‌ ಅಪ್‌ ಖರೀದಿಸುವ ಸ್ಥಿತಿಯಲ್ಲಿ ಇರುವುದಿಲ್ಲ ಎನ್ನುವುದನ್ನು ದೂರಸಂಪರ್ಕ ಕಂಪನಿಯು ಅರಿತುಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಗರಿಷ್ಠ ವೇಗದ ನಿತ್ಯದ ಡೇಟಾ ಮಿತಿಯು ಮುಗಿದ ತಕ್ಷಣವೇ ರಿಚಾರ್ಜ್‌ ಮಾಡಿಸಲು ಸಾಧ್ಯವಾಗದೇ ಇರುವವರಿಗೆ ಜಿಯೊದ ಹೊಸ ಯೋಜನೆಯಿಂದ ಹೆಚ್ಚಿನ ಪ್ರಯೋಜನ ಆಗಲಿದೆ ಎಂದಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.