ADVERTISEMENT

ರಿಲಯನ್ಸ್‌ ಕ್ಯಾಪಿಟಲ್‌ ಸ್ವಾಧೀನ; ಹಿಂದುಜಾ ಬಿಡ್‌ಗೆ ಒಲವು

ಪಿಟಿಐ
Published 29 ಜೂನ್ 2023, 16:55 IST
Last Updated 29 ಜೂನ್ 2023, 16:55 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ : ರಿಲಯನ್ಸ್‌ ಕ್ಯಾಪಿಟಲ್‌ ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳಲು ಹಿಂದುಜಾ ಸಮೂಹವು ಸಲ್ಲಿಸಿರುವ ಪುನಶ್ಚೇತನ ಯೋಜನೆಗೆ ಸಾಲ ನೀಡಿರುವ ಸಂಸ್ಥೆಗಳು ಒಪ್ಪಿಗೆ ನೀಡಿವೆ ಎಂದು ಮೂಲಗಳು ಹೇಳಿವೆ.

ಹಿಂದುಜಾ ಸಮೂಹದ ಇಂಡಸ್‌ಇಂಡ್‌ ಇಂಟರ್‌ನ್ಯಾಷನಲ್‌ ಹೋಲ್ಡಿಂಗ್ಸ್‌ ಲಿಮಿಟೆಡ್‌ (ಐಐಎಚ್‌ಎಲ್‌) ₹ 9,661 ಕೋಟಿ ಮೊತ್ತದ ಬಿಡ್‌ ಅನ್ನು ಸಲ್ಲಿಸಿದೆ. ಇದರ ರಿಲಯನ್ಸ್ ಕ್ಯಾಪಿಟಲ್‌ಗೆ ಸಾಲ ನೀಡಿರುವುದರಲ್ಲಿ ಶೇ 99ರಷ್ಟು ಸಂಸ್ಥೆಗಳು ಒಪ್ಪಿಗೆ ಸೂಚಿಸಿ ಮತ ಚಲಾಯಿಸಿವೆ ಎಂದು ಮೂಲಗಳು ತಿಳಿಸಿವೆ.

ರಿಲಯನ್ಸ್‌ ಕ್ಯಾಪಿಟಲ್‌ನಲ್ಲಿ ಇರುವ ₹ 500 ಕೋಟಿ ನಗದು ಸಹ ಸಾಲದಾತರಿಗೆ ಹೋಗಲಿದೆ. ಇದರಿಂದಾಗಿ ಒಟ್ಟು ₹10,200 ಕೋಟಿಯು ಸಾಲದಾತರಿಗೆ ಸಿಗಲಿದೆ. ಒಟ್ಟು ಸಾಲದ ಮೊತ್ತವು ₹16 ಸಾವಿರ ಕೋಟಿಯಲ್ಲಿ ಶೇ 65ರಷ್ಟು ವಸೂಲಿ ಆದಂತಾಗಲಿದೆ ಎಂದು ಮಾಹಿತಿ ನೀಡಿವೆ.

ADVERTISEMENT

ಕಂಪನಿಯ ಆಡಳಿತಾಧಿಕಾರಿಯು ಮುಂದಿನ ವಾರ ರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಮಂಳಿಯ (ಎನ್‌ಸಿಎಲ್‌ಟಿ) ಮುಂಬೈ ಪೀಠಕ್ಕೆ ಐಐಎಚ್‌ಎಲ್‌ನ ಪುನಶ್ಚೇತನ ಯೋಜನೆಯನ್ನು ಸಲ್ಲಿಸುವ ಸಾಧ್ಯತೆ ಇದೆ. ಯೋಜನೆಯ ಕುರಿತು ಮಾಹಿತಿ ನೀಡಲು ಜುಲೈ 15ರ ಗಡುವನ್ನು ಎನ್‌ಸಿಎಲ್‌ಟಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.