ADVERTISEMENT

ರಿಲಯನ್ಸ್‌ನಿಂದ ಡಿಜಿಟಲ್ ಇಂಡಿಯಾ ಸೇಲ್

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2024, 16:10 IST
Last Updated 16 ಆಗಸ್ಟ್ 2024, 16:10 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ರಿಲಯನ್ಸ್ ಡಿಜಿಟಲ್‌ನಿಂದ ಆಗಸ್ಟ್‌ 18ರ ವರೆಗೆ ‘ಡಿಜಿಟಲ್ ಇಂಡಿಯಾ ಸೇಲ್’ ನಡೆಯಲಿದೆ. ಈ ಮಾರಾಟದಲ್ಲಿ ಗ್ರಾಹಕರು ರಿಯಾಯಿತಿ ದರದಲ್ಲಿ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಖರೀದಿಸಬಹುದಾಗಿದೆ. 

ರಿಲಯನ್ಸ್‌ ಡಿಜಿಟಲ್ ಮಳಿಗೆ ಮತ್ತು ಮೈ ಜಿಯೊ ಮಳಿಗೆಗಳಲ್ಲಿ ಗ್ರಾಹಕರಿಗೆ ಈ ಸೌಲಭ್ಯ ದೊರೆಯಲಿದೆ. ಶೇ 25ರ ವರೆಗೆ ರಿಯಾಯಿತಿ ಮತ್ತು ಇಎಂಐ ಸೌಲಭ್ಯ ಪಡೆಯಬಹುದಾಗಿದೆ ಎಂದು ಕಂಪನಿ ತಿಳಿಸಿದೆ.

55 ಇಂಚಿನ ಯುಎಚ್‌ಡಿ ಟಿ.ವಿಯ ಆರಂಭಿಕ ಬೆಲೆ ₹29,900, ಐಫೋನ್‌ 13ರ ದರ ₹47,600, ಐಫೋನ್‌ 15ರ ಬೆಲೆ ₹63,600 ಆಗಿದೆ. ಇಂಟೆಲ್‌ ಕೋರ್‌ ಐ5 ಲ್ಯಾಪ್‌ಟಾಪ್‌ ₹39,999ಕ್ಕೆ ದೊರೆಯಲಿದೆ. ಹವಾ ನಿಯಂತ್ರಕಗಳಿಗೆ ₹6 ಸಾವಿರದ ವರೆಗೆ ರಿಯಾಯಿತಿ ಸಿಗಲಿದೆ ಎಂದು ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.