ನವದೆಹಲಿ : ಉದ್ಯಮಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಮಾರುಕಟ್ಟೆ ಮೌಲ್ಯವು (ಎಂ–ಕ್ಯಾಪ್) ₹20 ಲಕ್ಷ ಕೋಟಿ ದಾಟಿದೆ.
ಮಂಗಳವಾರ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ನಲ್ಲಿ ಷೇರಿನ ಮೌಲ್ಯ ಶೇ 1.88 ಮತ್ತು ನಿಫ್ಟಿಯಲ್ಲಿ ಶೇ 1.89ರಷ್ಟು ಏರಿಕೆಯಾಗಿದೆ.
ಪೇಟಿಎಂ ಷೇರು ಇಳಿಕೆ:
ಪೇಟಿಎಂನ ಮಾತೃಸಂಸ್ಥೆಯಾದ ಒನ್97 ಕಮ್ಯುನಿಕೇಷನ್ ಲಿಮಿಟೆಡ್‌ನ ಷೇರುಗಳ ಮೌಲ್ಯ ಶೇ 10ರಷ್ಟು ಇಳಿಕೆ ಆಗಿದೆ. ಬಿಎಸ್‌ಇ ಮತ್ತು ಎನ್‌ಎಸ್‌ಇಯಲ್ಲಿ ಷೇರಿನ ಬೆಲೆ ಕ್ರಮವಾಗಿ ₹380 ಮತ್ತು ₹380.35ಕ್ಕೆ ತಲುಪಿದೆ.
ಷೇರು ಸೂಚ್ಯಂಕಗಳು ಏರಿಕೆ:
ಬ್ಯಾಂಕಿಂಗ್, ಹಣಕಾಸು ಸೇವೆ ಮತ್ತು ಐ.ಟಿ ವಲಯದ ಷೇರುಗಳ ಖರೀದಿ ಹೆಚ್ಚಳದಿಂದಾಗಿ ಷೇರು ಸೂಚ್ಯಂಕಗಳು ಏರಿಕೆ ಕಂಡಿವೆ. ಸೆನ್ಸೆಕ್ಸ್ 482 ಅಂಶ ಏರಿಕೆಯಾಗಿ 71,555ರಲ್ಲಿ ಸ್ಥಿರಗೊಂಡಿತು. ನಿಫ್ಟಿ 127 ಅಂಶ ಹೆಚ್ಚಳವಾಗಿ 21,743ರಲ್ಲಿ ವಹಿವಾಟನ್ನು ಮುಕ್ತಾಯಗೊಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.