ADVERTISEMENT

Share Market | ರಿಲಯನ್ಸ್‌ಗೆ ₹28,607 ಕೋಟಿ ನಷ್ಟ

ಪಿಟಿಐ
Published 23 ಏಪ್ರಿಲ್ 2024, 13:15 IST
Last Updated 23 ಏಪ್ರಿಲ್ 2024, 13:15 IST
   

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್‌ ಲಿಮಿಟೆಡ್‌ನ ಷೇರಿನ ಮೌಲ್ಯವು ಮಂಗಳವಾರ ಶೇ 1ರಷ್ಟು ಇಳಿಕೆ ಕಂಡಿದೆ. 

2023–24ನೇ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಕಂಪನಿಯ ಲಾಭವು ಸ್ಥಿರವಾಗಿದೆ. ವಹಿವಾಟಿನಲ್ಲಿ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದ್ದರಿಂದ ಕಂಪನಿಯ ಷೇರಿನ ಮೌಲ್ಯ ಇಳಿಕೆಯಾಗಿದೆ. 

ಬಿಎಸ್‌ಇಯಲ್ಲಿ ಷೇರಿನ ಮೌಲ್ಯವು ಶೇ 0.85ರಷ್ಟು ಕುಸಿದಿದ್ದು, ಪ್ರತಿ ಷೇರಿನ ಬೆಲೆಯು ₹2,986 ಆಗಿದೆ. ಎನ್‌ಎಸ್‌ಇಯಲ್ಲಿ ಶೇ 1.35ರಷ್ಟು ಇಳಿಕೆ ಕಂಡಿದ್ದು, ಪ್ರತಿ ಷೇರಿನ ಬೆಲೆಯು ₹2,919.50 ಆಗಿದೆ. ಒಂದೇ ದಿನ ಕಂಪನಿಯ ಮಾರುಕಟ್ಟೆ ಮೌಲ್ಯವು ₹28,607 ಕೋಟಿ ಕರಗಿದೆ. ಒಟ್ಟು ಮಾರುಕಟ್ಟೆ ಮೌಲ್ಯವು ₹19.74 ಲಕ್ಷ ಕೋಟಿ ಆಗಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.