ADVERTISEMENT

ರಿಲಯನ್ಸ್‌ ಎಂ–ಕ್ಯಾಪ್‌ ₹70,195 ಕೋಟಿ ಇಳಿಕೆ

ಪಿಟಿಐ
Published 5 ಆಗಸ್ಟ್ 2024, 15:25 IST
Last Updated 5 ಆಗಸ್ಟ್ 2024, 15:25 IST
ರಿಲಯನ್ಸ್‌
ರಿಲಯನ್ಸ್‌   

ನವದೆಹಲಿ: ಷೇರು ಸೂಚ್ಯಂಕಗಳ ಇಳಿಕೆಯಿಂದ ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರಿನ ಮೌಲ್ಯ ಶೇ 3ಕ್ಕೂ ಹೆಚ್ಚು ಇಳಿದಿದೆ.

ಇದರಿಂದ ಕಂಪನಿಯ ಷೇರಿನ ಬೆಲೆ ಬಿಎಸ್‌ಇ ಮತ್ತು ಎನ್‌ಎಸ್‌ಇಯಲ್ಲಿ ₹2,894 ಆಗಿದೆ. ಷೇರಿನ ಮೌಲ್ಯ ಇಳಿಕೆಯಿಂದ ಕಂಪನಿಯ ಮಾರುಕಟ್ಟೆ ಮೌಲ್ಯ (ಎಂ–ಕ್ಯಾಪ್‌) ₹70,195 ಕೋಟಿ ಕರಗಿದ್ದು, ಒಟ್ಟು ಎಂ–ಕ್ಯಾಪ್‌ ₹19.58 ಲಕ್ಷ ಕೋಟಿಗೆ ಇಳಿದಿದೆ.

ಟಾಟಾ ಮೋಟರ್ಸ್‌ ಎಂ–ಕ್ಯಾಪ್‌ ಇಳಿಕೆ: ಟಾಟಾ ಮೋಟರ್ಸ್‌ ಷೇರಿನ ಮೌಲ್ಯ ಶೇ 7ರಷ್ಟು ಇಳಿಕೆಯಾಗಿದೆ. ಇದರಿಂದ ಬಿಎಸ್‌ಇ ಮತ್ತು ಎನ್‌ಎಸ್‌ಇಯಲ್ಲಿ ಷೇರಿನ ಬೆಲೆ ₹1,016 ಆಗಿದೆ.

ADVERTISEMENT

ಶುಕ್ರವಾರವು ಸಹ ಕಂಪನಿಯ ಷೇರಿನ ಮೌಲ್ಯ ಇಳಿದಿತ್ತು. ಎರಡು ವಹಿವಾಟು ದಿನಗಳಲ್ಲಿ ಮಾರುಕಟ್ಟೆ ಮೌಲ್ಯ ₹42,461 ಕೋಟಿ ಇಳಿಕೆಯಾಗಿದೆ. ಕಂಪನಿಯ ಒಟ್ಟು ಎಂ–ಕ್ಯಾಪ್‌ ₹3.38 ಲಕ್ಷ ಕೋಟಿಗೆ ಇಳಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.