ADVERTISEMENT

5 ಬಿಲಿಯನ್ ಡಾಲರ್ ಸಾಲ ಸಂಗ್ರಹಿಸಿದ ರಿಲಯನ್ಸ್

ಪಿಟಿಐ
Published 5 ಏಪ್ರಿಲ್ 2023, 15:26 IST
Last Updated 5 ಏಪ್ರಿಲ್ 2023, 15:26 IST
   

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ಅದರ ದೂರಸಂಪರ್ಕ ಸೇವಾ ಕಂಪನಿಯಾಗಿರುವ ಜಿಯೊ ಇನ್ಫೊಕಾಮ್‌ ವಿವಿಧ ಬ್ಯಾಂಕ್‌ಗಳಿಂದ ಒಟ್ಟು 5 ಬಿಲಿಯನ್ ಡಾಲರ್ (₹ 40 ಸಾವಿರ ಕೋಟಿ) ಸಾಲ ಸಂಗ್ರಹಿಸಿದೆ. ಇದು ದೇಶದ ಕಾರ್ಪೊರೇಟ್ ಇತಿಹಾಸದಲ್ಲಿ ವಿವಿಧ ಬ್ಯಾಂಕ್‌ಗಳಿಂದ ಪಡೆದಿರುವ ಅತಿದೊಡ್ಡ ಮೊತ್ತದ ಸಾಲ ಎಂದು ಮೂಲಗಳು ಹೇಳಿವೆ.

ರಿಲಯನ್ಸ್ ಇಂಡಸ್ಟ್ರೀಸ್‌ ಕಂಪನಿಯು 55 ಬ್ಯಾಂಕ್‌ಗಳಿಂದ 3 ಬಿಲಿಯನ್ ಡಾಲರ್ (₹ 24 ಸಾವಿರ ಕೋಟಿ), ಜಿಯೊ ಇನ್ಫೊಕಾಮ್ ಕಂಪನಿಯು 18 ಬ್ಯಾಂಕ್‌ಗಳಿಂದ 2 ಬಿಲಿಯನ್ ಡಾಲರ್ (₹ 16 ಸಾವಿರ ಕೋಟಿ) ಸಾಲ ಸಂಗ್ರಹಿಸಿವೆ ಎಂದು ಮೂಲಗಳು ಹೇಳಿವೆ. ಈ ಮೊತ್ತವನ್ನು ರಿಲಯನ್ಸ್ ಕಂಪನಿಯು ಬಂಡವಾಳ ವೆಚ್ಚಗಳಿಗೆ ಬಳಸಿಕೊಳ್ಳಲಿದೆ.

ಜಿಯೊ ಕಂಪನಿಯು ರಾಷ್ಟ್ರದಾದ್ಯಂತ 5ಜಿ ಜಾಲ ವಿಸ್ತರಣೆಗೆ ಬಳಕೆ ಮಾಡಿಕೊಳ್ಳಲಿದೆ. ಎರಡೂ ಕಂಪನಿಗಳಿಗೆ ಸಾಲ ನೀಡಿರುವ ಬ್ಯಾಂಕ್‌ಗಳ ಪಟ್ಟಿಯಲ್ಲಿ ಬ್ಯಾಂಕ್ ಆಫ್ ಅಮೆರಿಕ, ಎಚ್‌ಎಸ್‌ಬಿಸಿ, ಸಿಟಿ, ತೈವಾನ್‌ನ ಕೆಲವು ಬ್ಯಾಂಕ್‌ಗಳು ಇವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.