ADVERTISEMENT

ಎ.ಐ. ಸೂಪರ್‌ಕಂಪ್ಯೂಟರ್ ಅಭಿವೃದ್ಧಿಗೆ ರಿಲಯನ್ಸ್, ಎನ್‌ವಿಡಿಯಾ ಒಪ್ಪಂದ

ಪಿಟಿಐ
Published 8 ಸೆಪ್ಟೆಂಬರ್ 2023, 14:11 IST
Last Updated 8 ಸೆಪ್ಟೆಂಬರ್ 2023, 14:11 IST
   

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್‌) ಮತ್ತು ಅಮೆರಿಕದ ತಂತ್ರಜ್ಞಾನ ಕಂಪನಿ ಎನ್‌ವಿಡಿಯಾ ಜೊತೆಯಾಗಿ ಭಾರತದಲ್ಲಿ ಕೃತಕ ಬುದ್ಧಿಮತ್ತೆಯ ಸೂಪರ್‌ಕಂಪ್ಯೂಟರ್ ತಯಾರಿಸಲಿವೆ.

‘ಭಾರತದಲ್ಲಿ ಇಂದು ಇರುವ ಅತ್ಯಂತ ವೇಗದ ಸೂಪರ್‌ ಕಂಪ್ಯೂಟರ್‌ಗಿಂತ ಹೆಚ್ಚು ಶಕ್ತಿಶಾಲಿಯಾದ ಕೃತಕ ಬುದ್ಧಿಮತ್ತೆ ಮೂಲಸೌಕರ್ಯ ನಿರ್ಮಾಣಕ್ಕೆ ಎರಡು ಕಂಪನಿಗಳು ಕೆಲಸ ಮಾಡಲಿವೆ’ ಎಂದು ಹೇಳಿಕೆ ತಿಳಿಸಿದೆ.

ಈ ಘೋಷಣೆ ಹೊರಬೀಳುವ ಒಂದು ದಿನ ಮೊದಲು, ಎನ್‌ವಿಡಿಯಾ ಸಂಸ್ಥಾಪಕ ಹಾಗೂ ಸಿಇಒ ಜೆನ್ಸೆನ್ ಹುವಾಂಗ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು. ಭಾರತದಲ್ಲಿ 2004ರಲ್ಲಿ ಕಾರ್ಯಾಚರಣೆ ಆರಂಭಿಸಿರುವ ಎನ್‌ವಿಡಿಯಾ ನಾಲ್ಕು ಕೇಂದ್ರಗಳನ್ನು, 3,800 ನೌಕರರನ್ನು ಹೊಂದಿದೆ.

ADVERTISEMENT

ರಿಲಯನ್ಸ್ ಕಂಪನಿಯು ತನ್ನ 45 ಕೋಟಿ ಜಿಯೊ ಗ್ರಾಹಕರಿಗೆ ಎ.ಐ. ಅಪ್ಲಿಕೇಷನ್‌ಗಳನ್ನು ಅಭಿವೃದ್ಧಿಪಡಿಸಲಿದೆ, ವಿಜ್ಞಾನಿಗಳಿಗೆ, ಡೆವಲಪರ್‌ಗಳಿಗೆ ಹಾಗೂ ನವೋದ್ಯಮಗಳಿಗೆ ಎ.ಐ. ಮೂಲಸೌಕರ್ಯ ಒದಗಿಸಿಕೊಡಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.