ADVERTISEMENT

ರಿಲಯನ್ಸ್‌ ಪವರ್‌ಗೆ ₹397 ಕೋಟಿ ನಷ್ಟ

ಪಿಟಿಐ
Published 25 ಮೇ 2024, 12:59 IST
Last Updated 25 ಮೇ 2024, 12:59 IST
<div class="paragraphs"><p>ರಿಲಯನ್ಸ್‌ ಪವರ್‌</p></div>

ರಿಲಯನ್ಸ್‌ ಪವರ್‌

   

(ಚಿತ್ರ ಕೃಪೆ– @reliancepower)

ನವದೆಹಲಿ: ರಿಲಯನ್ಸ್‌ ಪವರ್‌ ಲಿಮಿಟೆಡ್‌ 2023–24ರ ಹಣಕಾಸು ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹397 ಕೋಟಿ ನಷ್ಟ ಕಂಡಿದೆ. ಇಂಧನ ದರದಲ್ಲಿ ಹೆಚ್ಚಳವಾಗಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.

ADVERTISEMENT

2022–23ರ ಇದೇ ಅವಧಿಯಲ್ಲಿ ಕಂಪನಿ ₹321 ಕೋಟಿ ಲಾಭ ಗಳಿಸಿತ್ತು. ಆ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಕಂಪನಿಯ ಒಟ್ಟು ವರಮಾನವು ₹1,853 ಕೋಟಿಯಷ್ಟು ಇದ್ದರೆ, 2023–24ರಲ್ಲಿ ಅದರ ಪ್ರಮಾಣವು ₹2,193 ಕೋಟಿಗೆ ಹೆಚ್ಚಳವಾಗಿದೆ. ಇಂಧನ ವೆಚ್ಚವು 2022–23ರ ಕೊನೆಯ ತ್ರೈಮಾಸಿಕದಲ್ಲಿ ₹823 ಕೋಟಿಯಷ್ಟು ಆಗಿದ್ದರೆ, ಈ ವರ್ಷ ಮಾರ್ಚ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಅದರ ಪ್ರಮಾಣ ₹953 ಕೋಟಿಗೆ ಏರಿಕೆಯಾಗಿದೆ. ಈ ಹೊರೆಯೇ ನಷ್ಟಕ್ಕೆ ಕಾರಣ ಎಂದು ಕಂಪನಿ ಷೇರುಪೇಟೆಗೆ ಶನಿವಾರ ತಿಳಿಸಿದೆ.

2023–24ರ ಪೂರ್ಣ ಹಣಕಾಸು ವರ್ಷದಲ್ಲಿ ಕಂಪನಿ ₹2,068 ಕೋಟಿ ನಷ್ಟ ಕಂಡಿದ್ದರೆ, ಅದಕ್ಕೂ ಹಿಂದಿನ ವರ್ಷದ ಇದೇ ಅವಧಿಯಲ್ಲಿ ₹470 ಕೋಟಿ ನಷ್ಟವಾಗಿತ್ತು. 

ಕಂಪನಿಯ ಮಂಡಳಿಯು ವಿದೇಶಿ ಕರೆನ್ಸಿ ಪರಿವರ್ತನೀಯ ಬಾಂಡ್‌ಗಳು (ಎಫ್‌ಸಿಸಿಬಿ) ಮತ್ತು ಅರ್ಹ ಸಾಂಸ್ಥಿಕ ನೀಡಿಕೆ (ಕ್ಯುಐಪಿ) ಮೂಲಕ ಸೆಕ್ಯುರಿಟಿಗಳ ವಿತರಣೆಗಾಗಿ ಸದಸ್ಯರ ಅಧಿಕಾರವನ್ನು ಅನುಮೋದಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.