ADVERTISEMENT

‘ಫ್ಯೂಚರ್‌’ ಖರೀದಿ: ಸ್ಪರ್ಧೆಯಲ್ಲಿ ರಿಲಯನ್ಸ್‌, ಜಿಂದಾಲ್‌, ಜಿಬಿಟಿಎಲ್‌

ಪಿಟಿಐ
Published 12 ಜುಲೈ 2023, 13:52 IST
Last Updated 12 ಜುಲೈ 2023, 13:52 IST
   

ನವದೆಹಲಿ: ದಿವಾಳಿ ಪ್ರಕ್ರಿಯೆಯಲ್ಲಿ ಇರುವ ಫ್ಯೂಚರ್ ಎಂಟರ್‌ಪ್ರೈಸಸ್‌ ಕಂಪನಿಯನ್ನು ಖರೀದಿಸಲು ರಿಲಯನ್ಸ್‌ ರಿಟೇಲ್‌ ವೆಂಚರ್ಸ್‌ ಸೇರಿದಂತೆ ಮೂರು ಕಂಪನಿಗಳನ್ನು ‘ನಿರೀಕ್ಷಿತ ಖರೀದಿದಾರ’ ಕಂಪನಿಗಳನ್ನಾಗಿ ಆಯ್ಕೆ ಮಾಡಲಾಗಿದೆ.

ಫ್ಯೂಚರ್‌ ಎಂಟರ್‌ಪ್ರೈಸಸ್‌ ಲಿಮಿಟೆಡ್‌ನ ದಿವಾಳಿ ಪ್ರಕ್ರಿಯೆ ನಿರ್ವಹಿಸುವ ವೃತ್ತಿಪರ ಅಧಿಕಾರಿಯು ರಿಲಯನ್ಸ್‌ ರಿಟೇಲ್‌, ಜಿಂದಾಲ್ ಮತ್ತು ಜಿಬಿಟಿಎಲ್‌ ಕಂಪನಿಗಳ ಅರ್ಜಿ ಅಂತಿಮಗೊಳಿಸಿದ್ದಾರೆ. ಕಂಪನಿಯು ಷೇರುಪೇಟೆಗೆ ಈ ಮಾಹಿತಿ ನೀಡಿದೆ.

ಈ ಮೂರು ಕಂಪನಿಗಳು ಆಗಸ್ಟ್‌ 24ರ ಒಳಗಾಗಿ ಪುನಶ್ಚೇತನ ಯೋಜನೆಯನ್ನು ಸಲ್ಲಿಸಬೇಕಿದೆ.

ADVERTISEMENT

ದಿವಾಳಿ ಪ್ರಕ್ರಿಯೆಯಲ್ಲಿ ಇರುವ, ಫ್ಯೂಚರ್ ಸಮೂಹದ ಇನ್ನೊಂದು ಕಂಪನಿ ಫ್ಯೂಚರ್ ರಿಟೇಲ್‌ ಅನ್ನು ಖರೀದಿಸಲು ಅಂತಿಮಗೊಂಡಿರುವ ಪಟ್ಟಿಯಲ್ಲಿಯೂ ರಿಲಯನ್ಸ್ ರಿಟೇಲ್‌ ಹೆಸರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.