ADVERTISEMENT

ಕೋರಮಂಗಲ: ರಿಲಯನ್ಸ್‌ ರಿಟೇಲ್‌ನ ಯುಸ್ಟಾ ಮಳಿಗೆ ಆರಂಭ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2024, 15:24 IST
Last Updated 10 ಅಕ್ಟೋಬರ್ 2024, 15:24 IST
ಬೆಂಗಳೂರಿನ ಕೋರಮಂಗಲದಲ್ಲಿ ಇತ್ತೀಚೆಗೆ ರಿಲಯನ್ಸ್ ರಿಟೇಲ್‌ನ ‘ಯುಸ್ಟಾ’ ಮಳಿಗೆಯನ್ನು ರಿಲಯನ್ಸ್‌ ರಿಟೇಲ್‌ನ ಫ್ಯಾಷನ್, ಲೈಫ್‌ಸ್ಟೈಲ್ ಅಧ್ಯಕ್ಷ ಹಾಗೂ ಸಿಇಒ ಅಖಿಲೇಶ್ ಪ್ರಸಾದ್ ಉದ್ಘಾಟಿಸಿದರು
ಬೆಂಗಳೂರಿನ ಕೋರಮಂಗಲದಲ್ಲಿ ಇತ್ತೀಚೆಗೆ ರಿಲಯನ್ಸ್ ರಿಟೇಲ್‌ನ ‘ಯುಸ್ಟಾ’ ಮಳಿಗೆಯನ್ನು ರಿಲಯನ್ಸ್‌ ರಿಟೇಲ್‌ನ ಫ್ಯಾಷನ್, ಲೈಫ್‌ಸ್ಟೈಲ್ ಅಧ್ಯಕ್ಷ ಹಾಗೂ ಸಿಇಒ ಅಖಿಲೇಶ್ ಪ್ರಸಾದ್ ಉದ್ಘಾಟಿಸಿದರು   

ಬೆಂಗಳೂರು: ಯುವಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಿರುವ ಫ್ಯಾಷನ್ ಬ್ರ್ಯಾಂಡ್‌ ಆದ ರಿಲಯನ್ಸ್ ರಿಟೇಲ್‌ನ ‘ಯುಸ್ಟಾ’ ಮಳಿಗೆಯು ಕೋರಮಂಗಲದಲ್ಲಿ ಕಾರ್ಯಾರಂಭ ಮಾಡಿದೆ.

ದೇಶದಾದ್ಯಂತ ಯುವ ಸ್ಟೈಲ್‌ಗೆ ಪ್ರಾಧಾನ್ಯ ನೀಡುವುದು ಮತ್ತು ಗ್ರಾಹಕರಿಗೆ ಬೇಕಾದದ್ದನ್ನು ನೀಡುವುದು ಇದರ ಗುರಿಯಾಗಿದೆ. ಹೋಲಿಕೆ ಮಾಡುವುದಕ್ಕೆ ಸಾಧ್ಯವಿಲ್ಲದಷ್ಟು ಕಡಿಮೆ ಬೆಲೆಗೆ ಹೊಸ ಫ್ಯಾಷನ್ ಧಿರಿಸುಗಳನ್ನು ನೀಡುವುದಕ್ಕೆ ಯುಸ್ಟಾ ಪ್ರಸಿದ್ಧಿ ಪಡೆದಿದೆ.

ಈ ಬ್ರ್ಯಾಂಡ್ ಯುವಜನರಿಗೆ ಅಚ್ಚುಮೆಚ್ಚಾಗಿದೆ. ಅದಕ್ಕೆ ಮುಖ್ಯ ಕಾರಣ ಆಗಿರುವುದು ರೋಮಾಂಚಕವಾದ ಸ್ಟೈಲ್ ಮತ್ತು ವ್ಯಕ್ತಿತ್ವಕ್ಕೆ ಒಪ್ಪುವ ರೀತಿಯಲ್ಲಿ ಇರುವಂಥ ಉಡುಪುಗಳು ಇಲ್ಲಿ ದೊರೆಯಲಿವೆ. 

ADVERTISEMENT

ಮಳಿಗೆಗೆ ಚಾಲನೆ: ರಿಲಯನ್ಸ್ ರಿಟೇಲ್‌ನ ಫ್ಯಾಷನ್ ಮತ್ತು ಲೈಫ್‌ಸ್ಟೈಲ್ ಅಧ್ಯಕ್ಷ ಹಾಗೂ ಸಿಇಒ ಅಖಿಲೇಶ್ ಪ್ರಸಾದ್ ಅವರು ಈ ಮಳಿಗೆಗೆ ಚಾಲನೆ ನೀಡಿದರು.

‘ಯುಸ್ಟಾ ಕೈಗೆಟುಕುವ ಬೆಲೆಯ ಆಫರ್ ನೀಡಲಿದೆ. ಜೊತೆಗೆ, ಯುವ ಫ್ಯಾಷನ್ ಲೋಕದಲ್ಲಿ ತನ್ನ ಆನ್-ಟ್ರೆಂಡ್ ಉಡುಪುಗಳನ್ನು ಪರಿಚಯಿಸಿದೆ. ಬೆಂಗಳೂರು ಯುವಶಕ್ತಿ ಮತ್ತು ಸೃಜನಶೀಲತೆಯ ಕೇಂದ್ರವಾಗಿದೆ. ಈ ಮಳಿಗೆಯು ಫ್ಯಾಷನ್‌ನ ಭವಿಷ್ಯ ರೂಪಿಸುವ ಟ್ರೆಂಡ್‌ಸೆಟರ್‌ಗಳಿಗೆ ಪ್ರಮುಖ ತಾಣವಾಗಲಿದೆ’ ಎಂದು ಹೇಳಿದ್ದಾರೆ.

ದೇಶದ 27 ನಗರಗಳಲ್ಲಿ ‘ಯುಸ್ಟಾ’ ಮಳಿಗೆ ಹೊಂದಿದೆ. ಈ ಬ್ರ್ಯಾಂಡ್ ಕೇರಳ, ಮಹಾರಾಷ್ಟ್ರ, ತೆಲಂಗಾಣ, ಪಶ್ಚಿಮ ಬಂಗಾಳ, ಗುಜರಾತ್, ತಮಿಳುನಾಡು, ಉತ್ತರ ಪ್ರದೇಶ, ಕರ್ನಾಟಕ, ಹರಿಯಾಣ ಸೇರಿ ಹಲವು ನಗರಗಳಲ್ಲಿ ಅಸ್ತಿತ್ವ ಪಡೆದಿದೆ.

ಯುಸ್ಟಾದ ಆನ್‌ಲೈನ್ ವ್ಯಾಪ್ತಿಯು ದೇಶದಲ್ಲಿ ಶೇ 98ರಷ್ಟು ಪಿನ್‌ಕೋಡ್‌ಗಳನ್ನು ಒಳಗೊಂಡಿದೆ.

ಯುಸ್ಟಾವು ವಿಶಿಷ್ಟ ‘ಸ್ಟಾರಿಂಗ್ ನೌ’ ಸಂಗ್ರಹಗಳು, ಟ್ರೆಂಡಿ ಉಡುಪುಗಳು, ಯುನಿಸೆಕ್ಸ್ ಶೈಲಿಗಳು ಮತ್ತು ವ್ಯಕ್ತಿತ್ವ ಆಧಾರಿತವಾದ ಸರಕುಗಳನ್ನು ಒಳಗೊಂಡಿದ್ದು,  ಕೈಗೆಟುಕುವ ಬೆಲೆಯಲ್ಲಿ ಲಭ್ಯವಿವೆ. ಹೆಚ್ಚಿನ ವಸ್ತುಗಳು ₹499ಕ್ಕಿಂತ ಕಡಿಮೆ ಬೆಲೆಗೆ ದೊರೆಯುತ್ತವೆ.

ಬೆಂಗಳೂರಿನ ಗ್ರಾಹಕರು ಕೋರಮಂಗಲ ಸ್ಟೋರ್‌ನಲ್ಲಿ ಹೊಸ ಸಂಗ್ರಹವನ್ನು ವೀಕ್ಷಿಸಿ ಖರೀದಿಸಬಹುದು ಅಥವಾ ಅಜಿಯೋ (AJIO) ಮತ್ತು ಜಿಯೊಮಾರ್ಟ್ (JioMart) ಮೂಲಕ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಬಹುದು. ಇತ್ತೀಚಿನ ಫ್ಯಾಷನ್ ಸಂಗ್ರಹಗಳಿಗಾಗಿ ಇನ್‌ಸ್ಟಾಗ್ರಾಂನಲ್ಲಿ @youstafashion ಅನ್ನು ಫಾಲೊ ಮಾಡಬಹುದಾಗಿದೆ.

‘ಯುಸ್ಟಾ’ ಮಳಿಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.