ADVERTISEMENT

ರಿಲಯನ್ಸ್‌ನಿಂದ ಹಣಕಾಸು ಸೇವೆ ಪ್ರತ್ಯೇಕಿಸಲು ಷೇರುದಾರರ ಒಪ್ಪಿಗೆ

ಪಿಟಿಐ
Published 4 ಮೇ 2023, 14:39 IST
Last Updated 4 ಮೇ 2023, 14:39 IST
   

ನವದೆಹಲಿ: ರಿಲಯನ್ಸ್‌ ಇಂಡಸ್ಟ್ರೀಸ್‌ನಿಂದ ಹಣಕಾಸು ಸೇವೆಗಳ ವಹಿವಾಟನ್ನು ಪ್ರತ್ಯೇಕಗೊಳಿಸಲು ಷೇರುದಾರರು ಮತ್ತು ಸಾಲದಾತರು ಒಪ್ಪಿಗೆ ನೀಡಿದ್ದಾರೆ.

ರಿಲಯನ್ಸ್‌ ಸ್ಟ್ರಾಟಜಿಕ್‌ ವೆಂಚರ್ಸ್‌ ಲಿಮಿಟೆಡ್‌ (ಆರ್‌ಎಸ್‌ಐಎಲ್‌) ರಿಲಯನ್ಸ್‌ನ ಅಂಗಸಂಸ್ಥೆ ಆಗಿದ್ದು, ಅದನ್ನು ಪ್ರತ್ಯೇಕಿಸಲು ನಿರ್ಧರಿಸಲಾಗಿದೆ. ಪ್ರತ್ಯೇಕಗೊಂಡ ಬಳಿಕ ಜಿಯೊ ಫೈನಾನ್ಶಿಯಲ್‌ ಸರ್ವಿಸಸ್ ಲಿಮಿಟೆಡ್ (ಜೆಎಫ್‌ಎಸ್‌ಎಲ್‌) ಎಂದು ಮರುನಾಮಕರಣ ಆಗಲಿದೆ.

ಮೇ 2ರಂದು ನಡೆದ ಷೇರುದಾರರ ಸಭೆಯಲ್ಲಿ ಹಣಕಾಸು ಸೇವೆಗಳ ವಹಿವಾಟನ್ನು ಪ್ರತ್ಯೇಕಿಸಲು ಶೇ 99.99ರಷ್ಟು ಮತಗಳು ಬಂದಿವೆ ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.

ADVERTISEMENT

ರಿಲಯನ್ಸ್‌ನಲ್ಲಿ ಹೊಂದಿರುವ ಪ್ರತಿ ಷೇರಿಗೆ ಜಿಯೊ ಫೈನಾನ್ಶಿಯಲ್‌ ಸರ್ವಿಸಸ್‌ನ ₹ 10 ಮುಖಬೆಲೆಯ ಒಂದು ಷೇರು ಸಿಗಲಿದೆ ಎಂದು ಕಂಪನಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.