ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ತನ್ನ ರಿಟೇಲ್ ವಹಿವಾಟಿನಲ್ಲಿ ಶೇಕಡ 40ರಷ್ಟು ಷೇರುಗಳನ್ನು ಅಮೆಜಾನ್‌ಗೆ ಮಾರಾಟ ಮಾಡುವ ಪ್ರಸ್ತಾವ ಮಾಡಿದೆ ಎಂದು ವರದಿಯಾಗಿದೆ.
‘ರಿಲಯನ್ಸ್ ಸಮೂಹದ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್‌ನಲ್ಲಿ ಹೂಡಿಕೆ ಮಾಡುವ ಕುರಿತು ಅಮೆಜಾನ್ ಮಾತುಕತೆ ನಡೆಸಿದೆ’ ಎಂದು ಮೂಲವೊಂದನ್ನು ಉಲ್ಲೇಖಿಸಿ ‘ಬ್ಲೂಮ್‌ಬರ್ಗ್ ನ್ಯೂಸ್’ ವರದಿ ಮಾಡಿದೆ.
ಈ ವಹಿವಾಟಿನ ಮೊತ್ತವು 20 ಬಿಲಿಯನ್ ಅಮೆರಿಕನ್ ಡಾಲರ್ (₹ 1.46 ಲಕ್ಷ ಕೋಟಿ) ಆಗಬಹುದು. ಇದು ಭಾರತದಲ್ಲಿ ನಡೆಯುವ ಅತಿದೊಡ್ಡ ವಹಿವಾಟು ಆಗಬಹುದು ಎಂದು ಕೂಡ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಲು ರಿಲಯನ್ಸ್ ಹಾಗೂ ಅಮೆಜಾನ್ ನಿರಾಕರಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.