ADVERTISEMENT

ರಿಲಯನ್ಸ್‌: ಬೋನಸ್‌ ಷೇರಿಗೆ ಅನುಮೋದನೆ

ಪಿಟಿಐ
Published 5 ಸೆಪ್ಟೆಂಬರ್ 2024, 14:52 IST
Last Updated 5 ಸೆಪ್ಟೆಂಬರ್ 2024, 14:52 IST
   

ನವದೆಹಲಿ: ರಿಲಯನ್ಸ್ ಇಂಡಸ್ಟ್ರಿಸ್‌ ಲಿಮಿಟೆಡ್‌ನ ಆಡಳಿತ ಮಂಡಳಿಯು ತನ್ನ ಷೇರುದಾರರಿಗೆ 1:1 ಅನುಪಾತದಲ್ಲಿ ಬೋನಸ್ ಷೇರು ನೀಡಲು ಗುರುವಾರ ಅನುಮೋದನೆ ನೀಡಿದೆ.

2017ರ ಸೆಪ್ಟೆಂಬರ್‌ ಬಳಿಕ ಇದೇ ಮೊದಲ ಬಾರಿಗೆ ಕಂಪನಿಯು ಬೋನಸ್‌ ಷೇರು ವಿತರಿಸುತ್ತಿದೆ. ಪ್ರತಿ ಒಂದು ಷೇರಿಗೆ ಒಂದು ಬೋನಸ್ ಷೇರು ನೀಡಲಿದೆ.

ಬೋನಸ್ ಷೇರಿಗೆ ಅರ್ಹತೆಯನ್ನು ತೀರ್ಮಾನಿಸುವ ದಿನಾಂಕವನ್ನು ಪ್ರತ್ಯೇಕವಾಗಿ ತಿಳಿಸಲಾಗುವುದು ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.