ಬೆಂಗಳೂರು: ರಿಲಯನ್ಸ್ ರಿಟೇಲ್‌ನ ಸೌಂದರ್ಯ ಫ್ಲಾಟ್‌ಫಾರಂ ಆದ ‘ಟಿರಾ’, ಚರ್ಮ ಮತ್ತು ಕೂದಲಿನ ಆರೈಕೆಯ ಬ್ರ್ಯಾಂಡ್ ಆಗಿರುವ ‘ಅಗಸ್ಟಿನಸ್ ಬೇಡರ್’ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
ಅಗಸ್ಟಿನಸ್ ಬೇಡರ್‌ನ ಉತ್ಪನ್ನಗಳು ಟಿರಾದಲ್ಲಿ ಪ್ರತ್ಯೇಕವಾಗಿ ದೊರೆಯಲಿವೆ. ಬೆಂಗಳೂರು, ಮುಂಬೈ, ದೆಹಲಿ ಮತ್ತು ಹೈದರಾಬಾದ್‌ನ ಆಯ್ದ ಟಿರಾ ಮಳಿಗೆಗಳು ಮತ್ತು ಆನ್‌ಲೈನ್‌ನಲ್ಲಿ ಲಭ್ಯವಿವೆ.
ಇದು ಭಾರತೀಯ ಗ್ರಾಹಕರಿಗೆ ಅಪೇಕ್ಷಿತ ಶ್ರೇಣಿಯ ಚರ್ಮದ ಆರೈಕೆ ಉತ್ಪನ್ನಗಳನ್ನು ಒದಗಿಸುತ್ತದೆ. ಸೆಲೆಬ್ರಿಟಿಗಳು, ಸೌಂದರ್ಯ ತಜ್ಞರು ಈ ಬ್ರ್ಯಾಂಡ್ ಅನ್ನು ಮೆಚ್ಚಿಕೊಂಡಿದ್ದಾರೆ ಎಂದು ಕಂಪನಿ ತಿಳಿಸಿದೆ.
ವೈಯಕ್ತಿಕ ಚರ್ಮದ ಆರೈಕೆ ಅಗತ್ಯಗಳಿಗೆ ಅನುಗುಣವಾಗಿ ಉತ್ಪನ್ನಗಳ ಆಯ್ಕೆಯ ಬಗ್ಗೆ ತಜ್ಞರ ಮಾರ್ಗದರ್ಶನದೊಂದಿಗೆ ಈ ಉತ್ಪನ್ನಗಳನ್ನು ಬಳಸಬಹುದು ಎಂದು ಕಂಪನಿ ತಿಳಿಸಿದೆ.
‘ಟಿರಾದಲ್ಲಿ ಜಾಗತಿಕ ಮತ್ತು ಸ್ವದೇಶಿ ಬ್ರ್ಯಾಂಡ್‌ಗಳನ್ನು ಭಾರತೀಯ ಗ್ರಾಹಕರಿಗೆ ತಲುಪಿಸುವ ಗುರಿ ಹೊಂದಿದ್ದೇವೆ. ಭಾರತದಲ್ಲಿ ಅಗಸ್ಟಿನಸ್ ಬೇಡರ್ ಪರಿಚಯವು ಐಷಾರಾಮಿ, ಉನ್ನತ ಕಾರ್ಯಕ್ಷಮತೆಯ ಚರ್ಮದ ಆರೈಕೆ ನೀಡುವ ನಮ್ಮ ಪ್ರಯತ್ನದಲ್ಲಿ ಮತ್ತೊಂದು ಹೆಜ್ಜೆಯಾಗಿದೆ’ ಎಂದು ಟಿರಾ ಸಹ-ಸಂಸ್ಥಾಪಕ ಭಕ್ತಿ ಮೋದಿ ಹೇಳಿದ್ದಾರೆ.
‘ಟಿರಾ ಜೊತೆಗಿನ ಈ ವಿಶೇಷ ಪಾಲುದಾರಿಕೆಯು ನಮಗೆ ಮಹತ್ವದ ಮೈಲುಗಲ್ಲಾಗಿದೆ. ನಮ್ಮ ಹೆಜ್ಜೆಗುರುತನ್ನು ವಿಶ್ವದ ಅತ್ಯಂತ ಕ್ರಿಯಾತ್ಮಕ ಸೌಂದರ್ಯ ಮಾರುಕಟ್ಟೆಗೆ ವಿಸ್ತರಿಸುತ್ತಿದ್ದೇವೆ’ ಎಂದು ಅಗಸ್ಟಿನಸ್ ಬೇಡರ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ಚಾರ್ಲ್ಸ್ ರೋಸಿಯರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.