ನವದೆಹಲಿ: ರೆನೊ ಕಂಪನಿಯು ಏಪ್ರಿಲ್ 1 ರಿಂದ ತನ್ನ ಹ್ಯಾಚ್ಬ್ಯಾಕ್ಕ್ವಿಡ್ ಶ್ರೇಣಿಯ ವಾಹನಗಳ ಬೆಲೆಯನ್ನು ಶೇ 3ರವರೆಗೂ ಏರಿಕೆ ಮಾಡುವುದಾಗಿ ತಿಳಿಸಿದೆ.
ತಯಾರಿಕೆ ವೆಚ್ಚ ಹೆಚ್ಚಾಗುತ್ತಿರುವುದರಿಂದ ಬೆಲೆ ಏರಿಕೆ ನಿರ್ಧಾರಕ್ಕೆ ಬರಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಕಂಪನಿ 0.8 ಲೀಟರ್ ಮತ್ತು 1 ಲೀಟರ್ನ ಮ್ಯಾನ್ಯುಯಲ್ ಮತ್ತು ಆಟೊಮೇಟೆಡ್ ಟ್ರಾನ್ಸ್ಮಿಷನ್ ಆಯ್ಕೆಗಳ ಕ್ವಿಡ್ ಅನ್ನು ಮಾರಾಟ ಮಾಡುತ್ತಿದೆ.ಬೆಲೆ (ದೆಹಲಿ ಎಕ್ಸ್ ಷೋರೂಂ) ₹ 2.66 ಲಕ್ಷದಿಂದ ₹ 4.63 ಲಕ್ಷದವರೆಗೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.