ADVERTISEMENT

ರೆಪ್ಕೋ ಬ್ಯಾಂಕ್‌ ಸಾಲ ಮೇಳ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2022, 19:58 IST
Last Updated 26 ಡಿಸೆಂಬರ್ 2022, 19:58 IST

ಬೆಂಗಳೂರು: ರೆಪ್ಕೋ ಬ್ಯಾಂಕ್ ಹಲಸೂರು ಶಾಖೆಯಲ್ಲಿ ಸಾಲ ಮೇಳ ಆಯೋಜಿಸಲಾಗಿದ್ದು, ಜ.5ರವರೆಗೆ ನಡೆಯಲಿದೆ.

ಮನೆ ನಿರ್ಮಾಣ, ಖರೀದಿ, ನವೀಕರಣ, ವಾಣಿಜ್ಯ ಉಪಯೋಗಿ ಕಟ್ಟಡಗಳ ನಿರ್ಮಾಣ, ವ್ಯಾಪಾರ ಅಭಿವೃದ್ಧಿ ಸೇರಿ ಇನ್ನಿತರ ಅವಶಕ್ಯತೆಗಳಿಗೆ ಸ್ಥಿರಾಸ್ತಿ ಮೇಲೆ ₹5 ಲಕ್ಷದಿಂದ ಮೇಲ್ಪಟ್ಟ ಅಡಮಾನ ಸಾಲ ಸೌಲಭ್ಯವನ್ನು ಕಡಿಮೆ ಬಡ್ಡಿ ದರದಲ್ಲಿ ನೀಡಲಾಗುತ್ತದೆ.

ಈ ಅವಧಿಯಲ್ಲಿ ಸಾಲ ಸಂಸ್ಕರಣಾ ವೆಚ್ಚದಲ್ಲಿ ಶೇ 50ರಷ್ಟು ರಿಯಾಯಿತಿ ದೊರೆಯಲಿದೆ. ಚಿನ್ನಾಭರಣಗಳ ಮೇಲೆ ಪ್ರತಿ ಗ್ರಾಂಗೆ ₹4,100ರಷ್ಟು ಸಾಲ ನೀಡಲಾಗುವುದು. ಸಾಲ ಮಂಜೂರಿಗಾಗಿ ಆದಾಯದ ವಿವರ ಪತ್ರಗಳು, ಸ್ಥಿರಾಸ್ತಿ ವಿವರಗಳೊಂದಿಗೆ ಶಾಖೆಗೆ ಭೇಟಿ ನೀಡಬಹುದು. ಹೆಚ್ಚಿನ ವಿವರಗಳಿಗೆ 9449052450 ಸಂಪರ್ಕಿಸಬಹುದು ಎಂದು ಬ್ಯಾಂಕ್ ಪ್ರಕಟಣೆ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.