ADVERTISEMENT

ಸಿಮೆಂಟ್‌ ಬೇಡಿಕೆ ಹೆಚ್ಚಳ ನಿರೀಕ್ಷೆ

ಪಿಟಿಐ
Published 4 ಆಗಸ್ಟ್ 2024, 14:32 IST
Last Updated 4 ಆಗಸ್ಟ್ 2024, 14:32 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ದೇಶದಲ್ಲಿ ನಿರ್ಮಾಣ ಚಟುವಟಿಕೆಗಳು ಹೆಚ್ಚುತ್ತಿವೆ. ಹಾಗಾಗಿ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸಿಮೆಂಟ್‌ ಬೇಡಿಕೆಯು ಶೇ 7ರಿಂದ ಶೇ 8ರಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ ಎಂದು ಅಲ್ಟ್ರಾಟೆಕ್‌ ಸಿಮೆಂಟ್ ಕಂಪನಿಯ ವಾರ್ಷಿಕ ವರದಿ ತಿಳಿಸಿದೆ.

ಮೂಲ ಸೌಕರ್ಯ ಹಾಗೂ ವಸತಿ ವಲಯದಲ್ಲಿ ಸಿಮೆಂಟ್‌ಗೆ ಬೇಡಿಕೆ ಹೆಚ್ಚಲಿದೆ ಎಂದು ತಿಳಿಸಿದೆ. 

ಈ ಬೇಡಿಕೆ ಪೂರೈಸಲು ಉದ್ಯಮವು ಹೆಚ್ಚುವರಿಯಾಗಿ 35ರಿಂದ 40 ದಶಲಕ್ಷ ಟನ್‌ನಷ್ಟು ಸಿಮೆಂಟ್‌ ಉತ್ಪಾದಿಸಬೇಕಿದೆ. ಈ ಉತ್ಪಾದನೆಯ ಪೈಕಿ ದೇಶದ ಪೂರ್ವ ಮತ್ತು ದಕ್ಷಿಣ ಭಾಗಕ್ಕೆ ಶೇ 60ರಿಂದ ಶೇ 65ರಷ್ಟು ಸಿಮೆಂಟ್‌ ಪೂರೈಕೆಯಾಗಲಿದೆ ಎಂದು ಆದಿತ್ಯ ಬಿರ್ಲಾ ಸಮೂಹಕ್ಕೆ ಸೇರಿದ ಈ ಕಂಪನಿಯು ಅಂದಾಜಿಸಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.