ADVERTISEMENT

₹2 ಸಾವಿರ ಮುಖಬೆಲೆಯ ಶೇ 97.82ರಷ್ಟು ನೋಟು ವಾಪಸ್‌: RBI

ಪಿಟಿಐ
Published 4 ಜೂನ್ 2024, 15:49 IST
Last Updated 4 ಜೂನ್ 2024, 15:49 IST
......
......   

ಮುಂಬೈ: ಮೇ ತಿಂಗಳ ಅಂತ್ಯಕ್ಕೆ ₹2 ಸಾವಿರ ಮುಖಬೆಲೆಯ ಶೇ 97.82ರಷ್ಟು ನೋಟುಗಳು ಬ್ಯಾಂಕಿಂಗ್‌ ವ್ಯವಸ್ಥೆಗೆ ಮರಳಿದ್ದು, ಇನ್ನೂ ₹7,755 ಕೋಟಿ ಮೌಲ್ಯದ ನೋಟುಗಳು ನಾಗರಿಕರ ಬಳಿ ಇವೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ತಿಳಿಸಿದೆ.  

ಒಟ್ಟು ₹3.56 ಲಕ್ಷ ಕೋಟಿ ಮೌಲ್ಯದ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ ಕಳೆದ ವರ್ಷದ ಮೇ 19ರಂದು ಆರ್‌ಬಿಐ ಘೋಷಿಸಿತ್ತು. 

ದೇಶದ ಎಲ್ಲಾ ಬ್ಯಾಂಕ್‌ಗಳಲ್ಲಿ ₹2 ಸಾವಿರ ಮುಖಬೆಲೆಯ ನೋಟುಗಳನ್ನು ಠೇವಣಿ ಇಡಲು ಅಥವಾ ಬೇರೆ ಮುಖಬೆಲೆಯ ನೋಟುಗಳೊಂದಿಗೆ ಬದಲಾಯಿಸಿಕೊಳ್ಳಲು ಅದೇ ವರ್ಷದ ಅಕ್ಟೋಬರ್‌ 7ರವರೆಗೆ ಆರ್‌ಬಿಐ ಕಾಲಾವಕಾಶ ನೀಡಿತ್ತು.

ADVERTISEMENT

ಸದ್ಯ ಆರ್‌ಬಿಐನ 19 ಪ್ರಾದೇಶಿಕ ಕಚೇರಿಗಳಲ್ಲಿ ಇದಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರಿನಲ್ಲಿರುವ ಪ್ರಾದೇಶಿಕ ಕಚೇರಿಯಲ್ಲೂ‌ ಈ ಸೇವೆ ಲಭ್ಯವಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.