ADVERTISEMENT

ಜನರ ಬಳಿ ಇನ್ನೂ ಇದೆ ₹7,581 ಕೋಟಿ ಮೌಲ್ಯದ ನಿಷೇಧಿತ ₹2 ಸಾವಿರದ ನೋಟುಗಳು!

ಪಿಟಿಐ
Published 1 ಜುಲೈ 2024, 9:29 IST
Last Updated 1 ಜುಲೈ 2024, 9:29 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮುಂಬೈ: ನಿಷೇಧಿತ ₹ 2 ಸಾವಿರ ಮುಖಬೆಲೆಯ ಶೇ 97.87ರಷ್ಟು ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಸೋಮವಾರ ಹೇಳಿದೆ. ₹7,581 ಕೋಟಿಯಷ್ಟು ಹಣ ಇನ್ನೂ ಜನರ ಬಳಿಯೇ ಇದೆ ಎಂದು ಅದು ಮಾಹಿತಿ ನೀಡಿದೆ.

2023ರ ಮೇ 19ರಂದು ಆರ್‌ಬಿಐ ₹2 ಸಾವಿರ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂ‍‍ಪ‍ಡೆದಿತ್ತು.

ADVERTISEMENT

ಮೇ 19ರಂದು ವಹಿವಾಟು ಅಂತ್ಯಗೊಂಡಾಗ ₹2 ಸಾವಿರ ಮುಖಬೆಲೆಯ ₹3.56 ಲಕ್ಷ ಕೋಟಿ ಮೌಲ್ಯದ ನೋಟುಗಳು ಚಲಾವಣೆಯಲ್ಲಿದ್ದವು. 2024ರ ಜೂನ್ 28ರಂದು ಅದರ ಮೌಲ್ಯ ₹7,581 ಕೋಟಿ ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

2023ರ ಅಕ್ಟೋಬರ್‌ 7ರವರೆಗೂ ಬ್ಯಾಂಕ್‌ಗಳಲ್ಲಿ ₹2 ಸಾವಿರ ಮೌಲ್ಯದ ನೋಟುಗಳನ್ನು ಠೇವಣಿ ಇಡಲು ಹಾಗೂ ಬದಲಾಯಿಸಿಕೊಳ್ಳಲು ಅವಕಾಶ ನೀಡಿತ್ತು. ಆ ಬಳಿಕ ಆರ್‌ಬಿಐನ ವಿತರಣಾ ಕಚೇರಿಗಳು ನೋಟುಗಳನ್ನು ಸ್ವೀಕರಿಸುತ್ತಿವೆ.

ಬೆಂಗಳೂರು, ಬೆಲಾಪುರ, ಭೋಪಾಲ್‌, ಭುವನೇಶ್ವರ, ಚಂಡೀಗಢ, ಚೆನ್ನೈ, ಗುವಾಹಟಿ, ಹೈದರಾಬಾದ್‌, ಜೈಪುರ, ಜಮ್ಮು, ಕಾನ್ಪುರ, ಕೋಲ್ಕತ್ತ, ಅಹಮದಾಬಾದ್‌, ಲಖನೌ, ಮುಂಬೈ, ನಾಗ್ಪುರ, ನವದೆಹಲಿ, ಪಟ್ನಾ ಹಾಗೂ ತಿರುವನಂತಪುರದಲ್ಲಿರುವ ಆರ್‌ಬಿಐ ಕಚೇರಿಗಳಲ್ಲಿ ಹಣ ಬದಲಾಯಿಸಿಕೊಳ್ಳಲು ಅವಕಾಶ ಇದೆ.

2016ರ ನವೆಂಬರ್‌ನಲ್ಲಿ ₹1 ಸಾವಿರ ಹಾಗೂ ₹ 500 ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿದ ಬಳಿಕ ₹ 2 ಸಾವಿರ ಮುಖಬೆಲೆಯ ನೋಟುಗಳನ್ನು ಪರಿಚಯಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.