ಮಂಗಳೂರು: ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪನಿಯು (ಕೆಐಒಸಿಎಲ್) ಮಾರ್ಚ್ 31ಕ್ಕೆ ಕೊನೆಗೊಂಡ 2021-22ನೆ ಹಣಕಾಸು ವರ್ಷದಲ್ಲಿ ಒಟ್ಟು ₹411.04 ಕೋಟಿ ಲಾಭ ಗಳಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ, ಶೇ 0.20ರಷ್ಟು ಪ್ರಗತಿಯಾಗಿದೆ.
2020–21ರಲ್ಲಿ ₹ 2,376.44 ಕೋಟಿ ಆದಾಯ ಗಳಿಸಿದ್ದ ಕಂಪನಿ, 2021–22ರಲ್ಲಿ ₹ 3,006.45 ಕೋಟಿ ಆದಾಯ ಗಳಿಸಿದೆ. ಇದು ಶೇ 26.51ರಷ್ಟು ಹೆಚ್ಚಳವಾಗಿದೆ. ತೆರಿಗೆ ಮುಂಚಿನ ಲಾಭ ₹411.03 ಕೋಟಿ ಆಗಿದ್ದು, ತೆರಿಗೆ ನಂತರದ ಲಾಭ ₹313.41 ಕೋಟಿ ಆಗಿದೆ. 2020–21 ರಲ್ಲಿ ತೆರಿಗೆ ನಂತರದ ಲಾಭ ₹301.17 ಕೋಟಿಯಾಗಿತ್ತು.
‘ಕೆಐಒಸಿಎಲ್ ಈ ವರ್ಷ 20.30 ಲಕ್ಷ ಟನ್ ಕಬ್ಬಿಣದ ಉಂಡೆ ತಯಾರಿಸಿದ್ದು, 20.72 ಲಕ್ಷ ಟನ್ ಮಾರಾಟ ಮಾಡಲಾಗಿದೆ’ ಎಂದು ಕಂಪನಿಯ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಸಾಮಿನಾಥನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.