ಬೆಂಗಳೂರು: ರುಚಿ ಸೋಯಾ ಇಂಡಿಸ್ಟ್ರೀಸ್ ಲಿಮಿಟೆಡ್, 2021–22ನೇ ಹಣಕಾಸು ವರ್ಷಕ್ಕೆ ₹ 2ರ ಮುಖಬೆಲೆಯ ಪ್ರತಿ ಷೇರಿಗೆ ₹ 5 ಲಾಭಾಂಶ ಘೋಷಿಸಿದೆ. ಇದು ಅತ್ಯಂತ ಗರಿಷ್ಠ ಪ್ರಮಾಣದ್ದಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.
ಕಂಪನಿಯು ಈ ಹಿಂದೆ 2008ರಲ್ಲಿ ಶೇ 25ರಷ್ಟು ಗರಿಷ್ಠ ಲಾಭಾಂಶ ನೀಡಿತ್ತು. 2021–22ನೇ ಹಣಕಾಸು ವರ್ಷದಲ್ಲಿ ಕಂಪನಿಯು ₹ 24,284 ಕೋಟಿ ವರಮಾನ ಗಳಿಸಿದೆ. 2020–21ನೇ ಹಣಕಾಸು ವರ್ಷದಲ್ಲಿ ಇದ್ದ ₹ 16,382 ಕೋಟಿ ವರಮಾನಕ್ಕೆ ಹೋಲಿಸಿದರೆ ಈ ಬಾರಿ ವರಮಾನವು ಶೇ 48ರಷ್ಟು ಹೆಚ್ಚಾಗಿದೆ. ಕಂಪನಿಯ ತೆರಿಗೆ, ಬಡ್ಡಿ, ಸಾಲ ತೀರುವಳಿ (ಇಬಿಐಟಿಡಿಎ) ₹ 1018 ಕೋಟಿಯಿಂದ ₹ 1565 ಕೋಟಿಗೆ ಏರಿಕೆ ಆಗಿದೆ.
2021–22ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯ ವರಮಾನವು ಶೇ 37ರಷ್ಟು ಹೆಚ್ಚಾಗಿದೆ. ಇಬಿಐಟಿಡಿಎ ಶೇ 54ರಷ್ಟು ಏರಿಕೆ ಕಂಡಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.