ADVERTISEMENT

ಡಾಲರ್‌ ಎದುರು ₹80.86ಕ್ಕೆ ಕುಸಿದ ರೂಪಾಯಿ: ಸಾರ್ವಕಾಲಿಕ ಕನಿಷ್ಠ  

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2022, 11:19 IST
Last Updated 22 ಸೆಪ್ಟೆಂಬರ್ 2022, 11:19 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯವು ಗುರುವಾರ 90 ಪೈಸೆಯಷ್ಟು ಇಳಿಕೆ ಕಂಡು, ₹80.86 ರಂತೆ ವಿನಿಮಯಗೊಂಡಿತು. ಇದು ರೂಪಾಯಿಯ ಸಾರ್ವಕಾಲಿಕ ಕನಿಷ್ಠ ಮಟ್ಟ ಎನಿಸಿಕೊಂಡಿದೆ.

ಫೆಬ್ರುವರಿ 24ರ ನಂತರ ರೂಪಾಯಿ ಮೌಲ್ಯದಲ್ಲಿ ಉಂಟಾದ ಭಾರಿ ಕುಸಿತ ಇದಾಗಿದೆ.

ಬುಧವಾರ ರೂಪಾಯಿ ವಹಿವಾಟು ₹79.97ರಲ್ಲಿ ಅಂತ್ಯವಾಗಿತ್ತು.

ADVERTISEMENT

ಅಮೆರಿಕ ಫೆಡರಲ್ ರಿಸರ್ವ್‌ ಬಡ್ಡಿದರ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಡಾಲರ್‌ ಮೌಲ್ಯವರ್ಧನೆಗೊಂಡಿದೆ. ಈ ಹಿನ್ನೆಲೆಯಲ್ಲಿ ರೂಪಾಯಿ ಮೌಲ್ಯದ ಕುಸಿತ ಉಂಟಾಗಿದೆ.

ಇವುಗಳನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.