ADVERTISEMENT

ಆರಂಭಿಕ ವಹಿವಾಟಿನಲ್ಲಿ ಅಮೆರಿಕ ಡಾಲರ್ ಎದುರು 11 ಪೈಸೆ ಕುಸಿದ ಭಾರತ ರೂಪಾಯಿ ಮೌಲ್ಯ

ಪಿಟಿಐ
Published 2 ಜನವರಿ 2024, 4:51 IST
Last Updated 2 ಜನವರಿ 2024, 4:51 IST
   

ಮುಂಬೈ: ಬೆಳಗಿನ ಆರಂಭಿಕ ವಹಿವಾಟಿನಲ್ಲಿ ಅಮೆರಿಕ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ 11 ಪೈಸೆ ಕುಸಿದು ₹83.32ಕ್ಕೆ ತಲುಪಿದೆ.

ದೇಶೀಯ ಷೇರುಗಳಲ್ಲಿನ ನಕಾರಾತ್ಮಕ ಪ್ರವೃತ್ತಿ ಮತ್ತು ಸಾಗರೋತ್ತರ ಮಾರುಕಟ್ಟೆಯಲ್ಲಿ ಅಮೆರಿಕ ಕರೆನ್ಸಿಗೆ ಹಚ್ಚಿದ ಬೇಡಿಕೆ ಈ ಕುಸಿತಕ್ಕೆ ಕಾರಣವಾಗಿದೆ.

ವಿದೇಶಿ ನಿಧಿಯ ಹೊರಹರಿವು ಮತ್ತು ಆಮದುದಾರರಿಂದ ಡಾಲರ್‌ಗೆ ಹೆಚ್ಚಿದ ಬೇಡಿಕೆಯು ಹೂಡಿಕೆದಾರರ ಮೇಲೆ ಪ್ರಭಾವ ಬೀರಿದೆ ಎಂದು ವಿದೇಶಿ ವಿನಿಮಯ ವ್ಯಾಪಾರಿಗಳು ಹೇಳಿದ್ದಾರೆ.

ADVERTISEMENT

ಅಂತರ ಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ಡಾಲರ್ ವಿರುದ್ಧ ರೂಪಾಯಿ ₹83.28ರಲ್ಲಿ ವಹಿವಾಟು ಆರಂಭಿಸಿತು. ನಂತರ, ₹83.32ಕ್ಕೆ ಕುಸಿಯುವ ಮೂಲಕ ಹಿಂದಿನ ವಹಿವಾಟಿನ ಮುಕ್ತಾಯಕ್ಕಿಂತ 11 ಪೈಸೆ ಕುಸಿತವನ್ನು ದಾಖಲಿಸಿತು.

ಸೋಮವಾರ, 2024ರ ಮೊದಲ ವಹಿವಾಟಿನಲ್ಲಿ, ಡಾಲರ್ ಎದುರು ರೂಪಾಯಿ ಮೌಲ್ಯ 5 ಪೈಸೆಗಳಷ್ಟು ಕುಸಿದು ₹83.21ಕ್ಕೆ ತಲುಪಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.