ADVERTISEMENT

ಅಮೆರಿಕದ ಡಾಲರ್‌ ಎದುರು ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ ಮೌಲ್ಯ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2024, 11:21 IST
Last Updated 21 ನವೆಂಬರ್ 2024, 11:21 IST
ಡಾಲರ್‌ ವಿರುದ್ಧ ಮತ್ತೆ ಕುಸಿದ ರೂಪಾಯಿ ಮೌಲ್ಯ
ಡಾಲರ್‌ ವಿರುದ್ಧ ಮತ್ತೆ ಕುಸಿದ ರೂಪಾಯಿ ಮೌಲ್ಯ   

ಮುಂಬೈ: ದೇಶದ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದ್ದು, ವಿದೇಶಿ ಬಂಡವಾಳದ ಹೊರಹರಿವು, ಕಚ್ಚಾ ತೈಲ ದರ ಏರಿಕೆಯಿಂದ ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ ಗುರುವಾರದ ವಹಿವಾಟಿನಲ್ಲಿ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ.

ರೂಪಾಯಿ ಮೌಲ್ಯ 8 ಪೈಸೆ ಇಳಿಕೆಯಾಗಿ, ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ವಹಿವಾಟಿನ ಅಂತ್ಯದ ವೇಳೆಗೆ 84.50ಕ್ಕೆ ಆಗಿದೆ.

ರಷ್ಯಾ–ಉಕ್ರೇನ್‌ ನಡುವೆ ನಡೆಯುತ್ತಿರುವ ಯುದ್ಧದಿಂದ ಹೂಡಿಕೆದಾರರು ಡಾಲರ್‌ ಸುರಕ್ಷಿತವೆಂದು ಭಾವಿಸಿದ್ದಾರೆ. ಇದರಿಂದ ಡಾಲರ್‌ ಮೌಲ್ಯ ಏರಿಕೆಯಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.