ADVERTISEMENT

ಅಮೆರಿಕ ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ ಮೌಲ್ಯ

ರಾಯಿಟರ್ಸ್
Published 17 ಮೇ 2022, 5:12 IST
Last Updated 17 ಮೇ 2022, 5:12 IST
ಐಸ್ಟಾಕ್ ಚಿತ್ರ
ಐಸ್ಟಾಕ್ ಚಿತ್ರ   

ಮುಂಬೈ: ಅಮೆರಿಕದ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯವು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಒಂದು ಡಾಲರ್‌ಗೆ 77.73ನಂತೆ ವಿನಿಮಯ ನಡೆದಿದೆ.

ಅಮೆರಿಕದ ಡಾಲರ್ ಬಲಗೊಳ್ಳುತ್ತಿರುವುದು ಮತ್ತು ದೇಶದ ಬಂಡವಾಳ ಮಾರುಕಟ್ಟೆಗಳಿಂದ ವಿದೇಶಿ ಬಂಡವಾಳ ಹೊರಹೋಗುತ್ತಿರುವುದು ರೂಪಾಯಿ ಮೌಲ್ಯ ಇಳಿಕೆಗೆ ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಶುಕ್ರವಾರದ ವಹಿವಾಟು ಮುಕ್ತಾಯದ ವೇಳೆಗೆ 77.45ಕ್ಕೆ ನಿಂತಿದ್ದ ರೂಪಾಯಿ ಮೌಲ್ಯ ಮಂಗಳವಾರ 77.73ಕ್ಕೆ ಕುಸಿದಿದೆ.

ADVERTISEMENT

ಸೆನ್ಸೆಕ್ಸ್, ನಿಫ್ಟಿ ಶೇಕಡ 0.7 ರಷ್ಟು ಏರಿಕೆಯೊಂದಿಗೆ ವಹಿವಾಟು ಆರಂಭಿಸಿದ್ದು, ದೇಶದ ಅತಿದೊಡ್ಡ ಐಪಿಒ ಭಾರತೀಯ ಜೀವ ವಿಮಾ ನಿಗಮದ ಮೇಲೆ ಎಲ್ಲರ ಗಮನ ನೆಟ್ಟಿದೆ.

ಭಾರತದ ರೂಪಾಯಿ ಮೌಲ್ಯದ ಕುಸಿದ ಮುಂದುವರೆದರೆ ರಿಸರ್ವ್ ಬ್ಯಾಂಕ್ ಮಧ್ಯಪ್ರವೇಶಿಸುವ ನಿರೀಕ್ಷೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.