ADVERTISEMENT

ರೂಪಾಯಿ ಕುಸಿಯುತ್ತಿಲ್ಲ: ಡಾಲರ್‌ ಮೌಲ್ಯ ವೃದ್ಧಿಸುತ್ತಿದೆ –ನಿರ್ಮಲಾ ಸೀತಾರಾಮನ್‌

ಪಿಟಿಐ
Published 17 ಅಕ್ಟೋಬರ್ 2022, 10:05 IST
Last Updated 17 ಅಕ್ಟೋಬರ್ 2022, 10:05 IST
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್    

ವಾಷಿಂಗ್ಟನ್‌: ‘ರೂಪಾಯಿ ದುರ್ಬಲವಾಗಿಲ್ಲ. ಆದರೆ ಅಮೆರಿಕದ ಡಾಲರ್‌ ಬಲಗೊಳ್ಳುತ್ತಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಐಎಂಎಫ್‌ ಮತ್ತು ವಿಶ್ವಬ್ಯಾಂಕ್‌ನ ವಾರ್ಷಿಕ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರೂಪಾಯಿ ಕುಸಿಯುತ್ತಿದೆ ಎನ್ನುವುದಕ್ಕಿಂತಲೂ ಡಾಲರ್‌ ಬಲಗೊಳ್ಳುತ್ತಿದೆ ಎನ್ನುವ ದೃಷ್ಟಿಕೋನ ನನ್ನದು. ಡಾಲರ್‌ ಮೌಲ್ಯವು ನಿರಂತರವಾಗಿ ಹೆಚ್ಚಾಗುತ್ತಲೇ ಇದೆ’ ಎಂದು ಹೇಳಿದ್ದಾರೆ.

‘ತಾಂತ್ರಿಕ ಪರಿಭಾಷೆಯಲ್ಲಿ ನಾನು ಮಾತನಾಡುತ್ತಿಲ್ಲ. ಆದರೆ, ಡಾಲರ್‌ ಮೌಲ್ಯ ಏರಿಕೆಯನ್ನು ಭಾರತದ ರೂಪಾಯಿ ಸಹಿಸಿಕೊಂಡಿದೆ ಎನ್ನುವುದು ಸತ್ಯಸಂಗತಿ. ಪ್ರವರ್ಧಮಾನಕ್ಕೆ ಬರುತ್ತಿರುವ ಬೇರೆ ದೇಶಗಳ ಕರೆನ್ಸಿಗಳಿಗಿಂತಲೂ ಉತ್ತಮ ಸ್ಥಿತಿಯಲ್ಲಿ ಭಾರತದ ಕರೆನ್ಸಿ ಇದೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಭಾರತದ ಆರ್ಥಿಕ ತಳಹದಿಯು ಬಲಿಷ್ಠವಾಗಿದ್ದು, ಜಗತ್ತಿನ ಇತರೆ ದೇಶಗಳಿಗೆ ಹೋಲಿಸಿದರೆ ಹಣದುಬ್ಬರವು ಕಡಿಮೆಯೇ ಇದೆ ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.