ADVERTISEMENT

ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ 14 ಪೈಸೆ ಇಳಿಕೆ

ಪಿಟಿಐ
Published 3 ಅಕ್ಟೋಬರ್ 2024, 15:43 IST
Last Updated 3 ಅಕ್ಟೋಬರ್ 2024, 15:43 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ಅಮೆರಿಕದ ಡಾಲರ್‌ ಎದುರು ಗುರುವಾರ ರೂಪಾಯಿ ಮೌಲ್ಯವು 14 ಪೈಸೆಯಷ್ಟು ಕುಸಿದಿದೆ. ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ವಹಿವಾಟಿನ ಅಂತ್ಯಕ್ಕೆ ₹83.96ಕ್ಕೆ ತಲುಪಿದೆ.

ಇಸ್ರೇಲ್ ಮತ್ತು ಇರಾನ್‌ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಕಚ್ಚಾ ತೈಲದ ಬೆಲೆಯಲ್ಲಿ ಏರಿಕೆಯಾಗಿದೆ. ಇದರಿಂದ ದೇಶೀಯ ಷೇರುಪೇಟೆ ಇಳಿಕೆ ಕಂಡಿದೆ. ಹಾಗಾಗಿ, ರೂಪಾಯಿ ಮೌಲ್ಯದಲ್ಲೂ ಕುಸಿತವಾಗಿದೆ.

‘ಅಮೆರಿಕದ ಕರೆನ್ಸಿಯು ಮೌಲ್ಯವರ್ಧನೆಗೊಂಡಿದೆ. ಚೀನಾದ ಷೇರುಪೇಟೆ ಏರಿಕೆ ಕಂಡಿದ್ದರಿಂದ ವಿದೇಶಿ ಬಂಡವಾಳದ ಹೊರಹರಿವು ಹೆಚ್ಚಿದೆ. ಇದರಿಂದ ರೂಪಾಯಿ ಮೌಲ್ಯ ಇಳಿಕೆಯ ಹಾದಿ ಹಿಡಿದಿದೆ’ ಎಂದು ವಿದೇಶಿ ವಿನಿಮಯದಾರರು ತಿಳಿಸಿದ್ದಾರೆ. 

ADVERTISEMENT

ದೇಶದ ಷೇರುಪೇಟೆಯಲ್ಲಿ ಮಂಗಳವಾರ ನಡೆದ ವಹಿವಾಟಿನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹5,579 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.