ADVERTISEMENT

ಅಮೆರಿಕದ ಡಾಲರ್ ಎದುರು ರೂಪಾಯಿ ಉತ್ತಮ ಸ್ಥಿತಿಯಲ್ಲಿದೆ: ನಿರ್ಮಲಾ ಸೀತಾರಾಮನ್‌

ಪಿಟಿಐ
Published 30 ಜೂನ್ 2022, 14:21 IST
Last Updated 30 ಜೂನ್ 2022, 14:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ಭಾರತದ ಕರೆನ್ಸಿಯು ಅಮೆರಿಕದ ಡಾಲರ್ ಎದುರು ಇತರ ಕೆಲವು ಕರೆನ್ಸಿಗಳಿಗಿಂತಲೂ ಉತ್ತಮ ಸ್ಥಿತಿಯಲ್ಲಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಗುರುವಾರ ಹೇಳಿದ್ದಾರೆ.

ರಷ್ಯಾ–ಉಕ್ರೇನ್‌ ಸಂಘರ್ಷದಿಂದ ಉಂಟಾಗಿರುವ ಜಾಗತಿಕ ಬಿಕ್ಕಟ್ಟು, ಕಚ್ಚಾ ತೈಲ ದರ ಏರಿಕೆ, ಹಣದುಬ್ಬರ ಹಾಗೂ ಕೇಂದ್ರೀಯ ಬ್ಯಾಂಕ್‌ಗಳು ಹಣಕಾಸು ನೀತಿ ಬಿಗಿಗೊಳಿಸಿರುವ ಕಾರಣಗಳಿಂದಾಗಿ, ‌ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳ ಕರೆನ್ಸಿಗಳ ಮೌಲ್ಯ ಕುಸಿತ ಕಾಣುತ್ತಿದೆ.

‘ನಮ್ಮದು ಮುಚ್ಚಿದ ಆರ್ಥಿಕತೆ ಅಲ್ಲ. ಹೀಗಾಗಿ ಜಾಗತಿಕ ಬೆಳವಣಿಗೆಗಳ ಪರಿಣಾಮಕ್ಕೆ ನಾವು ಒಳಗಾಗುತ್ತೇವೆ’ ಎಂದು ಕಾರ್ಯಕ್ರಮವೊಂದರ ಸಂದರ್ಭದಲ್ಲಿ ಅವರು ತಿಳಿಸಿದ್ದಾರೆ.

ADVERTISEMENT

ಇತರ ಕರೆನ್ಸಿಗಳಿಗೆ ಹೋಲಿಸಿದರೆಭಾರತದ ಕರೆನ್ಸಿಯು ಉತ್ತಮ ಸ್ಥಿತಿಯಲ್ಲಿದೆ ಎಂದು ಆರ್‌ಬಿಐ ಗುರುವಾರ ಬಿಡುಗಡೆ ಮಾಡಿರುವ ಅರ್ಥಿಕ ಸ್ಥಿರತೆ ವರದಿಯಲ್ಲಿಯೂ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.