ಮುಂಬೈ: ವಿತ್ತೀಯ ನೀತಿಯಲ್ಲಿ ಆರ್‌ಬಿಐ ಶುಕ್ರವಾರ ಕೈಗೊಳ್ಳಲಿರುವ ನಿರ್ಧಾರದ ನಿರೀಕ್ಷೆ, ತೈಲ ಬೆಲೆ ಕುಸಿತ, ಡಾಲರ್ ಅಪಮೌಲ್ಯದ ಹಿನ್ನೆಲೆಯಲ್ಲಿ ರೂಪಾಯಿ ಗಳಿಕೆ ಹೆಚ್ಚಿಸಿಕೊಂಡಿದೆ.
ಆರಂಭಿಕ ವಹಿವಾಟಿನಲ್ಲಿ ಅಮೆರಿಕ ಡಾಲರ್ ಎದುರು ರೂಪಾಯಿ 46 ಪೈಸೆ ಗಳಿಕೆ ಕಂಡು, 78.94ರಂತೆ ವಹಿವಾಟುಗೊಂಡಿತು. ಹಿಂದಿನ ದಿನದ ವಹಿವಾಟು ಮುಕ್ತಾಯದ ವೇಳೆ ರೂಪಾಯಿ 79.4650ರಷ್ಟು ಇತ್ತು.
ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿಮೂರು ದಿನಗಳ ಸಭೆಯ ಅಂತ್ಯದಲ್ಲಿ ಆರ್‌ಬಿಐ ಪ್ರಕಟಿಸಲಿರುವ ವಿತ್ತೀಯ ನೀತಿ ನಿರ್ಧಾರವನ್ನು ಮಾರುಕಟ್ಟೆ ಕುತೂಹಲದಿಂದ ಎದುರು ನೋಡುತ್ತಿದೆ. ಆರ್‌ಬಿಐ ತನ್ನ ಪ್ರಮುಖ ಬಡ್ಡಿದರವನ್ನು ಬದಲಾವಣೆ ಮಾಡುವ ಸಾಧ್ಯತೆಗಳಿವೆ.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.