ಮುಂಬೈ: ರೂಪಾಯಿ ಮೌಲ್ಯವು ಅಮೆರಿಕದ ಡಾಲರ್ ಎದುರು ಇದೇ ಮೊದಲ ಬಾರಿಗೆ ₹ 80ರ ಮಟ್ಟಕ್ಕೆ ಕುಸಿದಿತ್ತು. ನಂತರ ತುಸು ಚೇತರಿಸಿಕೊಂಡಿತು. ಸೋಮವಾರದ ವಹಿವಾಟಿನ ಕೊನೆಯಲ್ಲಿ ರೂಪಾಯಿಯು ಡಾಲರ್ ಎದುರು 16 ಪೈಸೆ ಕುಸಿದು ₹ 79.98ಕ್ಕೆ ತಲುಪಿದೆ.
ಕಚ್ಚಾ ತೈಲದ ಬೆಲೆ ಹೆಚ್ಚಾಗುತ್ತಿರುವುದು ಹಾಗೂ ವಿದೇಶಿ ಬಂಡವಾಳ ಹೊರಹೋಗುತ್ತಿರುವುದು ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣ ಎಂದು ರಿಲಯನ್ಸ್ ಸೆಕ್ಯುರಿಟೀಸ್‌ನ ಹಿರಿಯ ಸಂಶೋಧನಾ ವಿಶ್ಲೇಷಕ ಶ್ರೀರಾಮ್ ಅಯ್ಯರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.