ಮುಂಬೈ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು ಬುದವಾರ 18 ಪೈಸೆ ಇಳಿಕೆ ಆಗಿ ಸಾರ್ವಕಾಲಿಕ ಕನಿಷ್ಠ ಮಟ್ಟವಾದ ₹ 79.03ಕ್ಕೆ ಕುಸಿಯಿತು.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆ, ಡಾಲರ್ ಮೌಲ್ಯ ವೃದ್ಧಿ ಹಾಗೂ ವಿದೇಶಿ ಬಂಡವಾಳ ಹೊರಹರಿವು ರೂಪಾಯಿ ಮೌಲ್ಯ ಕುಸಿತಕ್ಕೆ ಪ್ರಮುಖ ಕಾರಣಗಳಾಗಿವೆ.
ದಿನದ ವಹಿವಾಟಿನ ಒಂದು ಹಂತದಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು ₹ 79.05ಕ್ಕೆ ಇಳಿಕೆ ಆಗಿತ್ತು.
ಈ ತಿಂಗಳಿನಲ್ಲಿ ಇದುವರೆಗೆ ರೂಪಾಯಿ ಮೌಲ್ಯವು ಶೇಕಡ 1.97ರಷ್ಟು ಕುಸಿತ ಕಂಡಿದೆ. ಈ ವರ್ಷದಲ್ಲಿ ಈವರೆಗೆ ರೂಪಾಯಿ ಮೌಲ್ಯವು ಶೇ 6.39ರಷ್ಟು ಇಳಿಕೆ ಆಗಿದೆ.
‘ವಿದೇಶಿ ಬಂಡವಾಳ ಹೊರಹರಿವು, ಅಮೆರಿಕದ ಡಾಲರ್ ಮೌಲ್ಯ ವೃದ್ಧಿ ಹಾಗೂ ಕಚ್ಚಾ ತೈಲ ದರ ಏರಿಕೆ ಆಗುತ್ತಿರುವುದರಿಂದ ಭಾರತದ ರೂಪಾಯಿ ಈ ವರ್ಷದ ಆರಂಭದಿಂದಲೂ ಇಳಿಮುಖವಾಗಿದೆ’ ಎಂದು ರೆಲಿಗೇರ್ ಬ್ರೋಕಿಂಗ್ ಲಿಮಿಟೆಡ್‌ನ ಉಪಾಧ್ಯಕ್ಷ ಸುಗಂಧ ಸಚ್‌ದೇವ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.