ADVERTISEMENT

ಅಮೆರಿಕ ಡಾಲರ್ ಎದುರು ₹ 81.18ಕ್ಕೆ ಕುಸಿದ ಭಾರತದ ರೂಪಾಯಿ ಮೌಲ್ಯ

ಪಿಟಿಐ
Published 23 ಸೆಪ್ಟೆಂಬರ್ 2022, 6:10 IST
Last Updated 23 ಸೆಪ್ಟೆಂಬರ್ 2022, 6:10 IST
   

ಮುಂಬೈ: ಶುಕ್ರವಾರದ ಆರಂಭಿಕ ವಹಿವಾಟಿನಲ್ಲೇ ಭಾರತದ ರೂಪಾಯಿ ಮೌಲ್ಯವು 44 ಪೈಸೆ ಕುಸಿದಿದ್ದು, ಅಮೆರಿಕ ಡಾಲರ್ ಎದುರು 81.18ಕ್ಕೆ ಇಳಿಯುವ ಮೂಲಕ ಸಾರ್ವಕಾಲಿಕ ಕುಸಿತ ದಾಖಲಿಸಿದೆ.

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಕರೆನ್ಸಿಯ ಬಲ, ದೇಶೀಯ ಷೇರುಗಳಲ್ಲಿನ ನಕಾರಾತ್ಮಕ ಪ್ರವೃತ್ತಿ ಮತ್ತು ಉಕ್ರೇನ್‌ನಲ್ಲಿನ ಭೌಗೋಳಿಕ ರಾಜಕೀಯ ಅಪಾಯದ ಹೆಚ್ಚಳವು ದೇಶೀಯ ಕರೆನ್ಸಿಯ ಮೌಲ್ಯ ಕುಸಿತಕ್ಕೆ ಕಾರಣವಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಅಂತರಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ರೂಪಾಯಿ ಮೌಲ್ಯವು 81.08ರಂತೆ ವಹಿವಾಟು ಪ್ರಾರಂಭಿಸಿ, 44 ಪೈಸೆ ಕುಸಿತ ಕಂಡು 81.23ಕ್ಕೆ ಇಳಿಯಿತು.

ADVERTISEMENT

ಗುರುವಾರ, ರೂಪಾಯಿ ಮೌಲ್ಯವು 83 ಪೈಸೆಗಳಷ್ಟು ಕುಸಿದು, 7 ತಿಂಗಳುಗಳಲ್ಲಿ ಒಂದೇ ದಿನ ಅತ್ಯಧಿಕ ಕುಸಿತ ಕಂಡಿತ್ತು. ಅಮೆರಿಕ ಡಾಲರ್ ಎದುರು 80.79ಕ್ಕೆ ವಹಿವಾಟು ಅಂತ್ಯಗೊಳಿಸುವ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.